ಏ.1 ರಂದು ಉಚಿತ ಯಕ್ಷಗಾನ ಪ್ರದರ್ಶನ ಹಾಗು ತರಬೇತಿ ಕಾರ್ಯಕ್ರಮ

ಶಿರಸಿ: ಬೆಂಗಳೂರಿನ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ, ಇಲ್ಲಿನ ಶಬರ ಸಂಸ್ಥೆ ಸೋಂದಾ ಸಹಭಾಗಿತ್ವದಲ್ಲಿ ಹಿಲಾಲು ಬೆಳಕಿನಲ್ಲಿ ಉಚಿತ ಯಕ್ಷಗಾನ ಪ್ರದರ್ಶನ ಹಾಗೂ ತರಬೇತಿ ಕಾರ್ಯಕ್ರಮ ಏ.1ರಂದು ತಾಲೂಕಿನ ಕಡಬಾಳ ಪ್ರಾಥಮಿಕ ಶಾಲಾ ಆವಾರದಲ್ಲಿ ರಾತ್ರಿ 9:30ರಿಂದ ಜರುಗಲಿದೆ.

ಅಕಾಡೆಮಿ ಸದಸ್ಯೆ ವಿಜಯನಳಿನಿ ರಮೇಶ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಅನಸೂಯಾ ಹೆಗಡೆ ವಹಿಸಿಕೊಳ್ಳುವರು. ಅತಿಥಿಗಳಾಗಿ ಪತ್ರಕರ್ತ ಸಂಘದ ತಾಲೂಕು ಅಧ್ಯಕ್ಷ ವಿರೂಪಾಕ್ಷ ಹೆಗಡೆ ಕಂಚೀಕೈ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವೇಶ್ವರ ನಾಯ್ಕ ಪಾಲ್ಗೊಳ್ಳುವರು.
ಬಳಿಕ ನಡೆಯುವ ಹಿಲಾಲು ಬೆಳಕಿನಲ್ಲಿ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಹಿಮ್ಮೇಳದಲ್ಲಿ ಭಾಗವತರಾದ ಸತೀಶ ದಂಟಕಲ್, ಗಜಾನನ ತುಳಗೇರಿ, ಮದ್ದಲೆಯಲ್ಲಿ ಶ್ರೀಪತಿ ಕಂಚೀಮನೆ, ಚಂಡೆಯಲ್ಲಿ ಪ್ರಮೋದ ಕಬ್ಬಿನಗದ್ದೆ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಗಣಪತಿ ಮುದ್ದಿನಪಾಲು, ರಾಮಚಂದ್ರ ಜೋಗಿನಮನೆ, ನರೇಂದ್ರ ಅತ್ತಿಮುರಡು, ಕೃಷ್ಣ ಪೂಜಾರಿ, ವೆಂಕಟ್ರಮಣ ಕಡಬಾಳ, ಪ್ರವೀಣ ತಟ್ಟಿಸರ, ಸಂತೋಷ ಜೋಗಿನಮನೆ, ಜಟ್ಟಿ ಮುಕ್ರಿ, ಸದಾನಂದ ಪಟಗಾರ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ಶಬರ ಸಂಸ್ಥೆ ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.