ಮೃಗಾ ಮೃಗೈಃ ಸಂಗಮುಪವ್ರಜಂತಿ ಗಾವಶ್ಚ ಗೋಭಿಃ ತುರಗಾಸ್ತುರಂಗೈಃ
ಮೂರ್ಖಾಶ್ಚ ಮೂರ್ಖೈಃ ಸುಧಿಯಃ ಸುಧೀಭಿಃ ಸಮಾನಶೀಲವ್ಯಸನೇಷು ಸಖ್ಯಮ್
ಗೆಳೆತನವು ಸಮಾನ ಗುಣ, ಸ್ವಭಾವ, ಮತ್ತು ಸಮಾನ ದುಃಖಿಗಳಾದವರ ಮಧ್ಯೆಯೇ ಸಂಭವಿಸುತ್ತದೆ. ಅದಕ್ಕೆ ಉದಾಹರಣೆ ಬೇಕಾ? ಇಲ್ಲಿದೆ ನೋಡಿ- ಹರಿಣಗಳು ಹರಿಣಗಳ ಜೊತೆಯಲ್ಲೇ ಗೆಳೆತನ ಬೆಳೆಸುವವೇ ಹೊರತು ಆನೆ ಮಂಗ ಹುಲಿಗಳ ಜೊತೆಯಲ್ಲ. ಹಾಗೇನೆ ಗೋವುಗಳು, ಕುದುರೆಗಳು ತಮ್ ತಮ್ಮವರ ಜೊತೆಯಲ್ಲಿ ಸಖ್ಯ ಬೆಳೆಸಿಕೊಂಡಿರುತ್ತವೆ. ಮಾನವರಲ್ಲಿಯೂ ಸಹ ಮೂರ್ಖರು ತಮ್ಮಂಥದೇ ಮೂರ್ಖರ ಜೊತೆಗೆ ಸಂಬಂಧ ಬೆಳೆಸಿಕೊಂಡಿರುತ್ತಾರೆ. ಬುದ್ಧಿವಂತರು ಬುದ್ಧಿವಂತರ ಜೊತೆಗೆ ಕೂಡಿಕೊಳ್ಳುತ್ತಾರೆ. ಮೂರ್ಖರನ್ನು ಬುದ್ಧಿವಂತರು ಮತ್ತು ಬುದ್ಧಿವಂತರನ್ನು ಮೂರ್ಖರು ಎಂದಿಗೂ ತಮ್ಮವರೆಂದು ಬಗೆಯಲಾರರು.