ಲಕ್ಷಾಂತರ ಮೌಲ್ಯದ ಅಡಿಕೆ ಕಳ್ಳತನಕ್ಕೆ ಯತ್ನ; ಗ್ರಾಮಸ್ಥರಿಂದ ಧರ್ಮದೇಟು

ಶಿರಸಿ: ತಾಲೂಕಿನ ಕುಳವೆ ಗ್ರಾಮದ ಹೊರವಲಯದಲ್ಲಿ ಐದು ಜನ ಕಳ್ಳರ ತಂಡ ಸುಮಾರು ಐದು ಕ್ವಿಂಟಲ್ ನಷ್ಟು ಅಡಿಕೆಯನ್ನು ಗಾಡಿಗೆ ತುಂಬುವಾಗ ಗ್ರಾಮಸ್ಥರ ಸಿಕ್ಕಿ ಬಿದ್ದಿರುವ ಘಟನೆ ಇಂದು ನಡೆದಿದೆ.

ಅಂದಾಜು ಒಂದು ಲಕ್ಷ ಮೌಲ್ಯದ ಅಡಿಕೆಯನ್ನು ಗೂಡ್ಸ್ ಆಟೋ ರಿಕ್ಷಾದಲ್ಲಿ ಅನುಮಾನಾಸ್ಪದವಾಗಿ ತುಂಬುತ್ತಿರುವುದನ್ನ ಗ್ರಾಮಸ್ಥರು ವಿಚಾರಿಸಿದಾಗ ಕಳ್ಳರೆಂದು ದೃಢಿಕರಿಸಿಕೊಂಡು ಹಿಡಿದು ಥಳಿಸಿ ಪೋಲಿಸರ ವಶಕ್ಕೆ ನೀಡಿದ್ದಾರೆ. ಐವರಲ್ಲಿ ಇಬ್ಬರು ಪರಾರಿಯಾಗಿದ್ದು, ಮೂವರು ಸೆರೆ ಹಿಡಿಯಲಾಗಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.