ಸುವಿಚಾರ

​ವನೇ ರಣೇ ಶತ್ರುಜಲಾಗ್ನಿಮಧ್ಯೇ ಮಹಾರ್ಣವೇ ಪರ್ವತಮಸ್ತಕೇ ವಾ

ಸುಪ್ತಂ ಪ್ರಮತ್ತಂ ವಿಷಮಸ್ಥಿತಂ ವಾ ರಕ್ಷಂತಿ ಪುಣ್ಯಾನಿ ಪುರಾಕೃತಾನಿ ||

ಕಾಡಲ್ಲಿ, ರಣಭೂಮಿಯಲ್ಲಿ, ಶತ್ರುಗಳ ಪಾಳಯದಲ್ಲಿ, ನೀರಿನಿಂದಾವೃತವಾದ ಜಾಗದಲ್ಲಿ, ಬೆಂಕಿಯಿಂದ ಸುತ್ತುವರಿದ ಪ್ರದೇಶದಲ್ಲಿ, ಬೆಟ್ಟದ ತುದಿಯಲ್ಲಿ ಸಿಕ್ಕಿಹಾಕಿಕೂಂಡವರಿರುತ್ತಾರಲ್ಲ, ಹಾಗೇನೆ ನಿದ್ದೆ ಹೋಗಿ ಮೈಮರೆತವರು, ಒಟ್ಟಿನಲ್ಲಿ ದುಷ್ಕರ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡವರು ಇರುತ್ತಾರಲ್ಲ- ಅವರನ್ನೆಲ್ಲ ಅವರವರ ಪೂರ್ವ ಜನ್ಮದ ಪುಣ್ಯವೇ ಕಾಪಾಡುತ್ತದೆ.

ಸುನಾಮಿ, ಭೂಕಂಪ, ಭಾರೀ ರಸ್ತೆ ಅಪಘಾತ ಅಂತೆಲ್ಲ ಆದಾಗ ಅಚ್ಚರಿಯೆಂಬಂತೆ ಬದುಕುಳಿಯುವ ಕೆಲವೇ ಕೆಲವು ಜನರನ್ನು ನೋಡಿದಾಗ ಈ ಮಾತು ಸತ್ಯವೆನ್ನಿಸುತ್ತದೆ. ಅವರು ಬದುಕಿರಲು ಕಾರಣವೇ ಇದ್ದಿರದು, ಆದರೂ ಬದುಕಿ ಬಂದಿರುತ್ತಾರೆ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.