ಮಾ. 26ಕ್ಕೆ ಶಿರಸಿಲಿ ಪೌರಾಣಿಕ ಆಖ್ಯಾನ ಕರ್ಣಪರ್ವ

ಶಿರಸಿ: ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನದಿಂದ ನಗರದ ತೋಟಗಾರ ಕಲ್ಯಾಣ ಮಂಟಪದಲ್ಲಿ ಮಾ.26ರ ಸಂಜೆ 4ಕ್ಕೆ ಪೌರಾಣಿಕ ಆಖ್ಯಾನ ಕರ್ಣಪರ್ವ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಅರುಣೋದಯ ಲಾಂಡ್ರಿಯ ಪರಮೇಶ್ವರ ಮಡಿವಾಳ ತಿಳಿಸಿದ್ದಾರೆ.

ಹಿಮ್ಮೇಳದಲ್ಲಿ ಭಾಗವತರಾದ ನೆಬ್ಬೂರು ನಾರಾಯಣ ಭಾಗವತ್, ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಶಂಕರ ಭಾಗವತ್, ಚಂಡೆಯಲ್ಲಿ ಗಣೇಶ ಗಾಂವಕರ್ ಪಾಲ್ಗೊಳ್ಳಲಿದ್ದಾರೆ.
ಶಂಭುಶಿಷ್ಯ ವಿನಾಯಕ ಹೆಗಡೆ ಕಲಗದ್ದೆ ಕರ್ಣನಾಗಿ, ಸಂಸ್ಕøತ ವಿದ್ವಾಂಸ ಉಮಾಕಾಂತ ಭಟ್ಟ ಮೆಲುಕೋಟೆ ಶಲ್ಯನಾಗಿ, ಅಪ್ಪಿ ಎಂದೇ ಹೆಸರಾದ ಸುಬ್ರಹ್ಮಣ್ಯ ಚಿಟ್ಟಾಣಿ ಅರ್ಜುನನಾಗಿ, ಉಭಯ ಪಾತ್ರ ಚತುರ ನೀಲಕೋಡ ಶಂಕರ ಹೆಗಡೆ ಕೃಷ್ಣನಾಗಿ, ಮೂರೂರು ನಾಗೇಂದ್ರ ಕೌರವನಾಗಿ ಹಾಗೂ ವೆಂಕಟೇಶ ಬೊಗ್ರಿಮಕ್ಕಿ ಬ್ರಾಹ್ಮಣನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.