ಬೃಹತ್ ಬೈಕ್ ರ್ಯಾಲಿ; ಕೇಸರಿಮಯವಾದ ಶಿರಸಿ ನಗರ

​ಶಿರಸಿ: ಯುಗಾದಿ ಉತ್ಸವದ ಅಂಗವಾಗಿ ಯುಗಾದಿ ಉತ್ಸವ ಸಮಿತಿ ಶಿರಸಿ ವತಿಯಿಂದ ನಗರದ ಶ್ರೀ ಮಾರಿಕಾಂಬಾ ದೇವಾಲಯದಿಂದ ನಗರದಿಂದ ಕಸ್ತೂರಬಾ ನಗರ, ವಿವೇಕಾನಂದ ನಗರ, ಮರಾಠಿಕೊಪ್ಪ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.

ಶನಿವಾರ ಸಂಜೆ ಮಾರಿಕಾಂಬಾ ದೇವಾಲಯದಿಂದ ಆರಂಭಗೊಂಡು, ಕೋಟೆಕೆರೆ, ಉಸುರಿ ರೋಡ್, ಕಸ್ತೂರಬಾ ನಗರ, ವಿವೇಕಾನಂದ ನಗರ, ಕಾಲೇಜು ರಸ್ತೆ, ಮರಾಟಿಕೊಪ್ಪ, ಗಣೇಶ ನಗರ, ಸಿಂಪಿಗಲ್ಲಿ, ರಾಯರಪೇಟೆ ಮಾರ್ಗವಾಗಿ ಮಿರ್ಜಾನ್ ಸರ್ಕಲ್ ಅಲ್ಲಿ ಸಮಾರೋಪಗೊಳ್ಳಲಿದೆ. ಈ ಬೈಕ್ ರ್ಯಾಲಿಯಲ್ಲಿ 160 ಕ್ಕೂಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗು ಸಾವಿರಕ್ಕೂ ಅಧಿಕ ಬೈಕ್ ಸವಾರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಕೃಷ್ಣ ಎಸಳೆ, ಮಾ. 28 ರಂದು ನಡೆಯುವ ಭವ್ಯ ಶೋಭಾಯಾತ್ರೆಯಲ್ಲಿ ಸಮಸ್ತ ಹಿಂದು ಬಾಂಧವರು ಭಾಗವಹಿಸಬೇಕೆಂದು ಕರೆ ನೀಡಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.