ಜಿಲ್ಲೆಗೆ 26 ಹೊಸ ಮೊಬೈಲ್ ಟವರ್ ಮಂಜೂರು; ಸಂಸದ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹೊಸದಾಗಿ 2016-17ನೇ ಸಾಲಿನಲ್ಲಿ 26 ಹೊಸ ಮೊಬೈಲ ಟಾವರ್‍ಗಳು ಮಂಜೂರಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಕೋರಿಕೆಯ ಮೇರೆಗೆ ಭಾರತ ಸಂಚಾರ ನಿಮಗದ ವತಿಯಿಂದ ಸರ್ವೆ ಮಾಡಿಸಿ ಮೊಬೈಲ ಟಾವರ್ ನಿರ್ಮಿಸಲು ಅನುಮೋದನೆಗೆ ಕಳುಹಿಸಿಕೊಡಲಾಗಿತ್ತು. ಇದಲ್ಲದೇ ಜಿಲ್ಲೆಯಲ್ಲಿ ಇನ್ನೂ 52 ಹೊಸ ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳಗಳನ್ನು ಗುರುತಿಸಿ ಈಗಾಗಲೇ ಅನುಮೋದನೆಗಾಗಿ ಕಳಿಹಿಸಿಕೊಡಲಾಗಿದೆ. ಹೆಚ್ಚುವರಿಯಾಗಿ 8 ಟೆಲಿಫೋನ್ ಎಕ್ಸಚೇಂಜ್‍ಗಳಲ್ಲಿಯೂ ಸಹ ಮೊಬೈಲ್ ಟವರ್ ನಿರ್ಮಾಣ ಮಾಡಲಾಗುವುದೆಂದು ಸಂಸದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ಅವಧಿಗೆ ಅವಶ್ಯವಿರುವ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಮೊಬೈಲ ಟಾವರ್ ನಿರ್ಮಿಸಲು ಸ್ಥಳಗಳನ್ನು ಗುರುತಿಸುವಂತೆ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಶೀಘ್ರವೇ ಸರ್ವೆ ಕಾರ್ಯಕೈಗೊಂಡು ಟಾವರ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

1 Comment

Leave A Reply

Your email address will not be published.