ಮಹಿಳಾ ವಕೀಲರಿಗಾಗಿ ವಿವಿಧ ಸ್ಪರ್ಧೆ; ಬಹುಮಾನ ವಿತರಣೆ

ಶಿರಸಿ: ಮಹಿಳಾ ವಕೀಲರ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಕೀಲರ ಸಂಘದ ಸಭಾಂಗಣದಲ್ಲಿ ಜರುಗಿದ ಮುಕ್ತ ಒಂದು ಮಿನಿಟ್ ಆಟದ ಸ್ಪರ್ಧೆಯು ಜರುಗಿತು. ಸ್ಪರ್ಧೆಯಲ್ಲಿ ಶಿರಸಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಸಾವಿತ್ರಿ ಎಸ್ ಕುಜ್ಜಿ ಪ್ರಥಮ ಬಹುಮಾನವನ್ನು 2ನೇ ಬಹುಮಾನ ಕು. ರಂಜಿತಾ ರವೀಂದ್ರ ಹಾಗು ತೃತೀಯ ಬಹುಮಾನವನ್ನು ವಕೀಲೆ ಕಾವ್ಯಾ ಜೆ. ಹೊನ್ನಾವರ ಪಡೆದಿರುತ್ತಾರೆ.

ಸ್ಪರ್ಧೆಯಲ್ಲಿ ವಿಜೇತರಿಗೆ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎನ್. ಸುಣಗಾರ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮಹಿಳಾ ವಕೀಲರ ವೇದಿಕೆಯ ಪದಾಧಿಕಾರಿಗಳಾದ ತ್ರಿವೇಣಿ ಗೌಡ, ಸಾವಿತ್ರಿ ಹೆಗಡೆ, ಕವಿತಾ ನಾಯ್ಕ, ಬಿ.ಬಿ. ಶೋಭಾ, ಜ್ಯೋತಿ ಗೌಡ, ಚಿತ್ರಾ ಭಗತ, ಸ್ವಾತಿ ಶೆಟ್ಟಿ, ಗಾಯತ್ರಿ ಎನ್. ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.