ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಾಕೇಶ ತಿರುಮಲೆ ಆಯ್ಕೆ

ಶಿರಸಿ: ಇಲ್ಲಿಯ ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಚುನಾವಣೆಯಲ್ಲಿ ಬಿಜೆಪಿಯ ರಾಕೇಶ  ತಿರುಮಲೆ ವಿಜಯಿಶಾಲಿಯಾಗಿ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಸಾಮಾಜಿಕ ಸ್ಥಾಯಿ ಸಮೀತಿಯ 11 ಸದಸ್ಯರ ಮತದಾನದಲ್ಲಿ 7ಮತಗಳನ್ನು ಪಡೆದು ರಾಕೇಶ ತಿರುಮಲೆ ಆಯ್ಕೆಗೊಂಡರೆ, ರಾಚಪ್ಪ ಜೋಗಳೇಕರ್ ಅವರು 4 ಮತ ಪಡೆದು ಪರಾಭವಗೊಂಡರು.
ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ರಾಕೇಶ ತಿರುಮಲೆ ಅವರಿಗೆ ಮಾಲಾರ್ಪಣೆ ಮಾಡಿ ಅಭಿನಂದಿಸಿದರು. ಚುನಾವಣಾ ಅಧಿಕಾರಿಗಳಾಗಿ ನಗರಸಭೆ ಪೌರಾಯುಕ್ತ ಮಹೇಂದ್ರಕುಮಾರ ಕಾರ್ಯ ನಿರ್ವಹಿಸಿದರು. ಈ ವೇಳೆ ನಗರಸಭೆ ಉಪಾಧ್ಯಕ್ಷೆ ಅರುಣಾ ವರ್ಣೆಕರ್, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.