ದ್ವಿವಾರ್ಷಿಕೋತ್ಸವದ ಅಂಗವಾಗಿ ಅಷ್ಟಾವಧಾನ-ಭಾವಗೀತೆ-ಭಜನೆ ಸೇವೆ

ಶಿರಸಿ: ತಾಲೂಕಿನ ಬನವಾಸಿಯ ಪರಶುರಾಮ ದೇವರು ಮತ್ತು ರೇಣುಕಾ ದೇವಿಯ ಪ್ರತಿಷ್ಠಾಪನೆಯ ದ್ವಿವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನದ ಆವಾರದ ಸಭಾಭವನದಲ್ಲಿ ಗುರುವಾರ ಶೃಂಗೇರಿಯ ಖ್ಯಾತ ಅಷ್ಟಾವಧಾನಿಗಳಾದ ಸೂರ್ಯ ಹೆಬ್ಬಾರ ಮೆಹೆಂದಳೆ ಹಾಗೂ ಸಂಗಡಿಗರಿಂದ ಅಷ್ಟಾವಧಾನ ಕಾರ್ಯಕ್ರಮವು ನಡೆಯಿತು.

ಬೆಳಿಗ್ಗೆಯಿಂದ ಪ್ರಾರಂಭಗೊಂಡ ಬ್ರಹ್ಮಕೂರ್ಚ ವಿಧಿ, ಮೂಲ ಮೂರ್ತಿಯ ವಿಶೇಷ ಪೂಜೆ, ಶ್ರೀಸೂಕ್ತ, ಪುರುಷಸೂಕ್ತ ಯಾಗ ಶ್ರೀ ಚಂಡಿ ಪಾರಾಯಣ ನಂತರದಲ್ಲಿ  ಬನವಾಸಿಯ ಮುಖ್ಯ ಬೀದಿಯಲ್ಲಿ ದೇವರ ಪಲ್ಲಕ್ಕಿ ಉತ್ಸವವು ಪವಮಾನ ಸೂಕ್ತ ಅಭಿಷೇಕ ಮಹಾಪೂಜೆ ಮಂಗಳಾರತಿ ನೆರವೇರಿಸಿ ಸಂಪನ್ನಗೊಂಡಿತು.
ವಾರ್ಷಿಕೋತ್ಸವದ ಅಂಗವಾಗಿ ಮಧ್ಯಾಹ್ನ 3ರಿಂದ 7ರವರೆಗೆ ಜೊತೆಯಲ್ಲಿ ಗೋಪಾಲ ಪರಾಂಜಪೆ ಸಂಗಡಿಗರಿಂದ ಭಜನೆ – ಭಾವಗೀತೆ ಸೇವಾ ಕಾರ್ಯಕ್ರಮವು ಜರುಗಿತು.  ಪಲ್ಲಕ್ಕಿ ಉತ್ಸವವನ್ನು ಬನವಾಸಿಯ ಮುಖ್ಯ ಬೀದಿಯಲ್ಲಿ ಆದಿತ್ಯ ದತ್ತಾತ್ರಯ ಮರಾಠೆ ಹಲಸಿನಕೈ ಹಾಗೂ ಸಂಗಡಿಗರು ಡೊಳ್ಳು ಕುಣಿತ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಶಿರಸಿ, ಸಿದ್ದಾಪುರ, ಸಾಗರ, ಕೊಲ್ಲಾಪುರಗಳಿಂದ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ವೇಳೆ ಪರಶುರಾಮ ದೇವಸ್ಥಾನದ ಅಧ್ಯಕ್ಷ ಚಂದ್ರಶೇಖರ ಬಾಪಟ ಶಿಂಡ್ಲಿ, ಪ್ರಶಾಂತ ಖರೆ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.