ಮಾ.11ಕ್ಕೆ ಸಂಗೀತ ಸಂಗಮದ ವಾರ್ಷಿಕೋತ್ಸವ-ಗಾಯನ ಕಾರ್ಯಕ್ರಮ

ಸಿದ್ದಾಪುರ: ಸಂಗೀತ ಸಂಗಮ ಬಿದ್ರಕಾನ ಸಂಗೀತ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವು ಮಾ.11 ಶನಿವಾರದಂದು ತಾಲೂಕಿನ ಬಿದ್ರಕಾನದಲ್ಲಿ ಅಪರಾಹ್ನ 3 ಘಂಟೆಯಿಂದ ಜರುಗಲಿದೆ.
ತಾಲೂಕಿನಲ್ಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಬೆಳವಣಿಗೆಯ ಸದುದ್ದೇಶದಿಂದ ಆರಂಭಗೊಂಡು ಕಳೆದ 26 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಗೀತ ಸಂಗಮ ಬಿದ್ರಕಾನ ಸಂಗೀತ ಶಾಲಾ ವಿದ್ಯಾರ್ಥಿಗಳ ಗಾಯನ-ವಾದನ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 9 ರಿಂದ ಅತಿಥಿ ಕಲಾವಿದರಾದ ವಾಣಿ ರಮೇಶ ಹೆಗಡೆ ಯಲ್ಲಾಪುರ ಹಾಗೂ ವಿನಾಯಕ ಹೆಗಡೆ ಹಿರೇಹದ್ದ ಇವರ ಗಾಯನ ಜರುಗಲಿದ್ದು, ಇವರಿಗೆ ಅನಂತ ಹೆಗಡೆ ವಾಜಗಾರ, ನಿತೀನ್ ಹೆಗಡೆ ಕಲಗದ್ದೆ ತಬಲಾ ಸಾಥ್ ಹಾಗೂ ಸತೀಶ್ ಭಟ್ಟ್ ಹೆಗ್ಗಾರ ಇವರು ಹಾರ್ಮೋನಿಯಂ ನಲ್ಲಿ ಸಹಕರಿಸಲಿದ್ದಾರೆ ಎಂದು ಶ್ರೀಗಣೇಶ ಹೆಗಡೆ ಉಳ್ಳಾನೆ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.