ಭಾರತೀಯ ಸಂಗೀತ ಪರಿಷತ್ ಶಿರಸಿ ಘಟಕ ಉದ್ಘಾಟನೆ ಮಾ.12 ಕ್ಕೆ

ಶಿರಸಿ: ಭಾರತೀಯ ಸಂಗೀತ ಪರಿಷತ್ (ಉಕ) ಇದರ ಶಿರಸಿ ಘಟಕದ ಉದ್ಘಾಟನೆ, ಸದಸ್ಯತ್ವ ಅಭಿಯಾನ ಹಾಗು ಸಂಗೀತ ಕಾರ್ಯಕ್ರಮವು ನಗರದ ನಯನ ಸಭಾಂಗಣದಲ್ಲಿ ಮಾ. 12 ಭಾನುವಾರ ಸಂಜೆ 4 ಘಂಟೆಯಿಂದ ನಡೆಯಲಿದೆ.
ಜಾತಿ, ಮತ, ಬೇಧವಿಲ್ಲದ ನಮ್ಮ ಭಾರತೀಯ ಸಂಗೀತದ ಪರಂಪರೆ ಮತ್ತು ವಿವಿಧ ಘರಾಣೆಗಳ ಪ್ರಸಾರ, ಅವುಗಳ ರಕ್ಷಣೆ, ಈ ಕುರಿತಾದ ಚಿಂತನ ಮತ್ತು ಅಧ್ಯಯನ ನಡೆಸುವುದು. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ನಮ್ಮ ಯುವ ಜನಾಂಗವನ್ನು ನಮ್ಮ ಸಂಸ್ಕೃತಿಯತ್ತ, ಸಂಗೀತದತ್ತ ಪ್ರೇರೆಪಿಸುವಂತೆ ಕಾರ್ಯನಿರ್ವಹಿಸುವುದು. ಸಂಗೀತ ಪಾಠವನ್ನೇ ಬದುಕಿನ ವೃತ್ತಿಯನ್ನಾಗಿ ಮಾಡಿಕೊಂಡ ಕಲಾವಿದರನ್ನು ಗುರುತಿಸಿ ಸರಕಾರದಿಂದ ಸಿಗಬಹುದಾದ ಸಹಾಯಧನದ ಜೊತೆಯಲ್ಲಿ ಸ್ಥಳೀಯವಾಗಿ ಅವರನ್ನು ಸನ್ಮಾನಿಸಲಾಗುವುದು. ಆರ್ಥಿಕವಾಗಿ ಬಡವರಾಗಿರುವ ಪ್ರತಿಭಾನ್ವಿತ ಸಂಗೀತ ಕಲಿಕಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸಂಗೀತ ಕಲಿಕೆಗೆ ಪೂರಕವಾದ ಉಪಕರಣ, ಪುಸ್ತಕ ಸಾಮಗ್ರಿಗಳನ್ನು ದೊರಕಿಸಿಕೊಟ್ಟು ಸಂಗೀತ ಕಲಿಕೆಗೆ ಪ್ರೋತ್ಸಾಹಿಸುವುದು. ಹೀಗೆ ಹಲವಾರು ಧ್ಯೇಯೋದ್ದೇಶವನ್ನು ಹಮ್ಮಿಕೊಂಡಿರುವ ಸಂಗೀತ ಪರಿಷತ್ ಸಂಗೀತ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಲಿದೆ ಎಂದು ಶ್ರೀಪಾದ ಹೆಗಡೆ ಸೋಮನಮನೆ ಸಂಘಟನೆಯ ತಿಳಿಸಿದರು.

ಅಂದು ನಡೆಯಲಿರುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಸಂಗೀತ ಪರಿಷತ್ತಿನ ರಾಜ್ಯ ಘಟಕದ ಗೌರವಾಧ್ಯಕ್ಷ ವಿ ಯು ಪಟಗಾರ ವಹಿಸಲಿದ್ದು, ಉದ್ಘಾಟಕರಾಗಿ ಭಾಸಪ ಜಿಲ್ಲಾ ಘಟಕದ ಅಧ್ಯಕ್ಷ ಕಡತೋಕದ ಎಸ್. ಶಂಭು ಭಟ್ಟ ಅವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಧುರೀಣ ಪ್ರಮೋದ ಭಟ್ಟ, ಹುಬ್ಬಳ್ಳಿಯ ಮನೋಜ ಹಾನಗಲ್, ವೈದ್ಯ ಯುವರಾಜ ಆರ್ ಪಿ, ಪಂ. ಎಂ ಪಿ ಹೆಗಡೆ, ಪಂ. ಸಂಜೀವ ಪೋತದಾರ, ಡಾ. ಶಿವರಾಮ ಕೆವಿ, ಡಾ. ಶೈಲಜಾ ಮಂಗಳೂರು, ಡಾ. ಕೃಷ್ಣಮೂರ್ತಿ ಭಟ್ಟ, ವಿ. ಪ್ರಕಾಶ ಹೆಗಡೆ ಯಡಳ್ಳಿ ಉಪಸ್ಥಿತರಿರುವರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಕು. ನಾಗರತ್ನ ದೇಶಭಂಡಾರಿ ಇವರಿಂದ ಗಾಯನ ನಡೆಯಲಿದೆ. ನಂತರದಲ್ಲಿ ಪ್ರೋ. ಆರ್ ವಿ ಹೆಗಡೆ ಹಳ್ಳದಕೈ ಇವರಿಂದ ರುದ್ರವೀಣಾ ವಾದನ ನಡೆಯಲಿದೆ. ಇವರಿಗೆ ತಬಲಾ ಸಾಥ್ ಅನ್ನು ಪ್ರೊ. ಅನಂತ ಹೆಗಡೆ ವಾಜಗಾರು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.