ಶ್ರೀಮಾರಿಕಾಂಬಾ ದೇವಾಲಯದ ಧರ್ಮದರ್ಶಿಗಳ ಮಧ್ಯೆ ಮೂಡಿದೆಯೇ ಬಿರುಕು..?

ಶಿರಸಿ: ಹೌದು, ಹೀಗೊಂದು ಅನುಮಾನ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಶ್ರೀ ಮಾರಿಕಾಂಬಾ ದೇವಾಲಯದ ಆಗು-ಹೋಗುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದವರಿಗೆ ಸಾಮಾನ್ಯವಾಗಿ ಬಂದಿರುತ್ತದೆ ಹಾಗು ಜನಸಾಮಾನ್ಯರೂ ಸಹ ಇದೇ ಮಾತುಗಳನ್ನು ಪುನರುಚ್ಛಿಸುತ್ತಿದ್ದಾರೆ. ಹೊಸ ಧರ್ಮದರ್ಶಿ ಮಂಡಳಿ ಬಂದು ವರುಷ ತುಂಬುವುದರೊಳಗೆ ಇಂತಹ ಸುದ್ದಿಗಳು ಜನರ ಬಾಯಿಂದ ಬರತೊಡಗಿದಾಗ ಸ್ವಲ್ಪ ಈ ಕುರಿತು ಗಂಭೀರ ಚಿಂತನೆ ಅತ್ಯಗತ್ಯವಾಗಿದೆ.

ಆರಂಭದಲ್ಲಿ ಹೊಸ ಧರ್ಮದರ್ಶಿ ಮಂಡಳಿಯ ಕಾರ್ಯವೈಖರಿಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೇ, ಜನರ ಒಂದು ವಿಶ್ವಾಸವನ್ನು ಗಳಿಸಿತ್ತು. ಆದರೆ ದಿನ ಕಳೆದಂತೆ ಆ ಕಾರ್ಯವೈಖರಿ ಕಾಣುತ್ತಿಲ್ಲ. ಧರ್ಮದರ್ಶಿಗಳಲ್ಲಿ ಮುಂಚಿನ ಆ ಕಾರ್ಯಕ್ಷಮತೆ, ಉತ್ಸಾಹ ಕಂಡು ಬರುತ್ತಿಲ್ಲ. ಅದರಲ್ಲೂ ಇತ್ತಿಚಿಗೆ ಒಬ್ಬ ಧರ್ಮದರ್ಶಿಗಳು ದೈವಾದೀನರಾದ ನಂತರದ ದಿನದಲ್ಲಿ ಧರ್ಮದರ್ಶಿಗಳ ನಡುವಿನ ಅಂತರ ಹೆಚ್ಚಿದೆ
ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈಗ ಇರುವ ನಾಲ್ಕು ಜನ ಧರ್ಮದರ್ಶಿಗಳಲ್ಲೇ ಬಣಗಳಾಗಿ ಯಾವ ಕಾರ್ಯಗಳೂ ಸರಿಯಾಗಿ ನಡೆಯುತ್ತಿಲ್ಲ ಎಂದೂ ಸಹ ಹಲವರ ಆರೋಪವಾಗಿದೆ.
ಒಟ್ಟಿನಲ್ಲಿ ಶಕ್ತಿಪೀಠದ ಆಡಳಿತ ಶಕ್ತಿ ಕುಂದಿರುವಂತೆ ಭಾಸವಾಗುತ್ತಿರುವಾಗ, ಈ ಕುರಿತು ಧರ್ಮದರ್ಶಿಗಳು ಆತ್ಮಾವಲೋಕನ ಮಾಡಿಕೊಳ್ಳುವುದರ ಅವಶ್ಯಕತೆ ಮತ್ತು ಅನಿವಾರ್ಯತೆ ಇದ್ದಂತೆ ಕಂಡುಬರುತ್ತಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.