ನಾಳೆ ಬನವಾಸಿಯಲ್ಲಿ ಅಷ್ಟಾವಧಾನ ಕಾರ್ಯಕ್ರಮ

ಶಿರಸಿ: ತಾಲೂಕಿನ ಬನವಾಸಿಯ ಪಂಪವನದ ಸಮೀಪದ ಪರಶುರಾಮ ದೇವಾಲಯದಲ್ಲಿ ಮಾ. 9 ಗುರವಾರ ಅಪರಾಹ್ನ 4 ಘಂಟೆಯಿಂದ ಅವಧಾನಿಗಳಾದ ಸೂರ್ಯ ಹೆಬ್ಬಾರ್ ಮೆಹೆಂದಳೆ ಇವರಿಂದ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ನಿಷೇಧಾಕ್ಷರೀ- ಡಾ. ರಾಘವೇಂದ್ರ ಭಟ್,  ಸಮಸ್ಯಾಪೂರ್ತಿ-ಬಾಲಚಂದ್ರ ಭಟ್,  ದತ್ತಪದೀ- ಗೋಪಾಲಕೃಷ್ಣ ಹಂಗಾರಿ, ಚಿತ್ರಕ್ಕೆ ಪದ್ಯ- ಆದಿತ್ಯ ಎಚ್. ಜಿ, ಅಪ್ರಸ್ತುತ ಪ್ರಸಂಗ- ರವಿಶಂಕರ ಭಟ್ ಕೆ.ಎಸ್, ಆಶುಕವಿತೆ- ಶರಣ್ಯ ಪಿ, ಕಾವ್ಯವಾಚನ- ನಾರಾಯಣ ಬಿ ರಾಯ್ಕರ್ ಹಾಗು ಸಂಖ್ಯಾಬಂಧ- ಪ್ರದೀಪ ಭಟ್ ಇವರುಗಳು ಪಾಲ್ಗೊಳ್ಳಲಿದ್ದು ಆಸಕ್ತ ಕಲಾ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.