ಕಸಾಪ ತಾಲೂಕಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಶಿರಸಿ: ಶಿರಸಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಮಂಗಳವಾರ ನಗರದ ನೆಮ್ಮದಿ ಕುಟೀರದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ತಾಲೂಕು ಕಸಾಪ ಅಧ್ಯಕ್ಷ ಪ್ರಕಾಶ ಭಾಗವತ್, ನಗರದ ಟಿಎಂಎಸ್ ಸಭಾಂಗಣದಲ್ಲಿ  ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ನರಸಿಂಹ ಪರಾಂಜಪೆ ವಹಿಸಿಕೊಳ್ಳಲಿದ್ದಾರೆ. ಮಾರಿಕಾಂಬಾ ದೇವಸ್ಥನದಿಂದ ಮುಂಜಾನೆ 9ಕ್ಕೆ ಮೆರವಣಿಗೆಯಲ್ಲಿ ಬರಮಾಡಿಕೊಂಡು ವಿ.ತಿ ಶೀಗೇಹಳ್ಳಿ ವೇದಿಕೆಯಲ್ಲಿ ನಡೆಯುವ ಸಮ್ಮೇಳವನ್ನು 10ಕ್ಕೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಲಿದ್ದಾರೆ. ವಾಸುದೇವ ಶಾನಭಾಗ್ ಅವರು ಎಂ.ಎಸ್.ಧಾರೇಶ್ವರ ಮಹಾದ್ವಾರ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ12ಕ್ಕೆ ಕೆ.ಜಿ.ಭಟ್ಟ ಅಧ್ಯಕ್ಷತೆಯಲ್ಲಿ ಸರ್ವಾಧ್ಯಕ್ಷರ ಸಾಹಿತ್ಯಾವಲೋಕನವನ್ನು ಆರ್.ಡಿ.ಹೆಗಡೆ ಆಲ್ಮನೆ ಮಾಡಲಿದ್ದಾರೆ. ಪ್ರಸಕ್ತ ಸಾಲಿನ ಸಾಹಿತ್ಯ ಕೃತಿಗಳ ಕುರಿತು ಭವ್ಯಾ ಹಳೆಯೂರು, ತಾಲೂಕು ಸಾಹಿತ್ಯಕ್ಕೆ ಯಕ್ಷಗಾನದ ಕೊಡುಗೆ ಕುರಿತು ನಾಗರಾಜ್ ಜೋಶಿ ಮಾತನಾಡಲಿದ್ದಾರೆ. ಮಧ್ಯಾಹ್ನ 2ಕ್ಕೆ ಡಾ. ಕೆ.ಬಿ.ಪವಾರ್ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಲಿದ್ದು, ಲಕ್ಷ್ಮಣ ಶಾನಭಾಗ್, ಡಿ.ಎಸ್.ನಾಯ್ಕ, ರಾಜು ಹೆಗಡೆ, ಸಿಂಧುಚಂದ್ರ, ಕಲಾವತಿ ಹೆಗಡೆ, ಕಲ್ಪನ ಪ್ರಭಾಕರ್, ರೂಪಾ ಹೆಗಡೆ, ಕಾವ್ಯ ಸತೀಶ ಕಿಬ್ಬಳ್ಳಿ, ಮಹದೇವ ಚೆಲುವಾದಿ, ನಾಗೇಶ ಭಟ್ಟ, ಮನೋಹರ ಮಲ್ಮನೆ, ಗಾಯತ್ರಿ ಸಚಿನ್,  ಅರುಣಾ ಭಾಗವತ್, ಶಂಕರನಾರಾಯಣ ಹೆಗಡೆ, ಅರುಣ ನಾಯ್ಕ, ಎನ್.ವಿ.ಮಂಜುನಾಥ, ರಾಜೇಶ್ವರಿ ಹೆಗಡೆ, ಮೋಹನ ಭಟ್ಟ, ಗುರುಪ್ರಸಾದ ಶಾಸ್ತ್ರಿ, ಎಚ್.ಆರ್.ನರಸಿಂಹ, ಭಾರತಿ ನಾಯ್ಕ ಕಾವ್ಯ ವಾಚಿಸಲಿದ್ದಾರೆ. ಬಳಿಕ ಶೈಲಜಾ ಮಂಗಳೂರು ಕಲಾ ಬಳಗದಿಂದ ಗೋಪಾಲಕೃಷ್ಣ ಕೇರಿಮನೆ, ರಾಜೀವ ಅಜ್ಜಿಬಳ, ಪ್ರಕಾಶ ಭಾಗವತ್, ರಮೇಶ ಹೆಗಡೆ, ಜಿ.ಸು.ಬಕ್ಕಳ, ಸತೀಶ ಹೆಗಡೆ ಅವರ ಭಾವಗೀತೆ ಗಾಯನ ನಡೆಯಲಿದೆ.
 ಸಮ್ಮಾನ ಕಾರ್ಯಕ್ರಮದಲ್ಲಿ ಸರ್ವಾಧ್ಯಕ್ಷ ನರಸಿಂಹ ಪರಂಜಪೆ, ಜಿ.ಎಂ.ಹೆಗಡೆ ತಾರಗೋಡ, ನ್ಯಾಯವಾದಿ ಜಿ.ಟಿ.ಹೆಗಡೆ ಕೊರ್ಲಕೈ, ಸಾಮಾಜಿಕ ಕಾರ್ಯದಲ್ಲಿ ಸಾವಿತ್ರಮ್ಮ ಕಾನಸೂರು, ಸಾಹಿತ್ಯದಲ್ಲಿ ಎಲ್.ಆರ್.ಭಟ್ಟ, ಜಗದೀಶ ಭಂಡಾರಿ, ಸಂಘಟನೆ ನಾಗೇಶ ನಾಯ್ಕ, ಸಮಾಜ ಸೇವೆಗಳಲ್ಲಿ ರೋಟರಿ ಕ್ಲಬ್, ಲಯನ್ಸ ಕ್ಲಬ್, ಪತ್ರಿಕೋದ್ಯಮದಲ್ಲಿ ಅಶೋಕ ಹಾಸ್ಯಗಾರ, ಪಿ.ಎಸ್.ಸದಾನಂದ,  ಸಾಂಸ್ಕೃತಿಕ ದಲ್ಲಿ ಜಿ.ವಿ.ಗಾಯತ್ರಿ ಅವರನ್ನು ಗೌರವಿಸಲಾಗುತ್ತಿದೆ.
ಸಂಜೆ 5:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಿವಾನಂದ ಕಳವೆ ಸಮಾರೋಪ ಮಾತುಗಳನ್ನು ಆಡಲಿದ್ದಾರೆ. ಭೀಮಣ್ಣ ನಾಯ್ಕ, ಭಾಗೀರಥಿ ಹೆಗಡೆ, ಡಾ. ಶಿವರಾಮ ಕೆ.ವಿ., ಕೆ.ಎನ್.ಹೊಸ್ಮನಿ ಪಾಲ್ಗೊಳ್ಳಲಿದ್ದಾರೆ ಎಂದರು.
ಈ ವೇಳೆ ಸರ್ವಾಧ್ಯಕ್ಷ ನರಸಿಂಹ ಪರಾಂಜಪೆ, ಮಹದೇವ ಚೆಲುವಾದಿ, ಶ್ರೀನಿವಾಸ ನಾಯ್ಕ, ಡಿ.ಬಂಗಾರಪ್ಪ, ಎಂ.ಆರ್.ಹೆಗಡೆ ಕಾನಗೋಡ, ಆರ್.ಡಿ.ಹೆಗಡೆ, ಗಾಯತ್ರೀ ರಾಘವೇಂದ್ರ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.