ನಾಳೆಯಿಂದ ಎಮ್ಇಎಸ್ ಹಬ್ಬ; ಪ್ರತಿಭೆಗಳ ಅನಾವರಣ

ಶಿರಸಿ: ಇಲ್ಲಿನ ಮೊಡರ್ನ ಎಜ್ಯುಕೇಶನ್ ಸೊಸೈಟಿ ನಡೆಸುತ್ತಿರುವ ಎಂಇಎಸ್ ಹಬ್ಬ ಹಲವು ವಿಶೇಷತೆಗಳ ತವರಾಗಲಿದೆ. ಜ.7 ಹಾಗೂ 8ರಂದು ನಡೆಯುವ ಉತ್ಸವ ಹಲವು ಆಕರ್ಷಣೆಯ ಕೇಂದ್ರವಾಗಲಿದೆ ಎಂದು  ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಸ್.ಎಸ್.ಭಟ್ಟ ತಿಳಿಸಿದ್ದಾರೆ.
ಎರಡೂ ದಿನ ಮುಂಜಾನೆ 9ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೊದಲನೆಯ ದಿವಸ ಮಧ್ಯಾಹ್ನ 3ಕ್ಕೆ ಕಾರ್ಯಕ್ರಮದ ಉದ್ಘಾಟನೆ ನಿವೃತ್ತ ಲೋಕಾಯುಕ್ತ ಎನ್. ಸಂತೋಷ ಹೆಗಡೆ ಮಾಡಲಿದ್ದಾರೆ.  ಮಕ್ಕಳಿಗೆ  ಹಾಗೂ ಪಾಲಕರಿಗೆ  ವಿಶೇಷ ಉಪನ್ಯಾಸ  ನೀಡಲಿದ್ದಾರೆ. ಎರಡನೇ ದಿನದ ಉದ್ಘಾಟನೆಯನ್ನು ಖ್ಯಾತ ಸಾಹಿತಿ ಡಾ. ನಾ. ಡಿಸೋಜಾ ಮಾಡಲಿದ್ದಾರೆ.

ಸಾಂಸ್ಕøತಿಕ ವಿವಿಧ ಚಟುವಟಿಕೆಗಳು ಎಂ.ಇ.ಎಸ್. ಸಂಸ್ಥೆಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಜರುಗಲಿದ್ದು, ಹೊರಗಿನಿಂದ ವಿಶೇಷ ಆಮಂತ್ರಣದ ಮೇಲೆ ಕೆಲವರು ಮಾತ್ರ ಪಾಲ್ಗೊಳ್ಳಲಿದ್ದಾರೆ. 

7 ರಂದು ಖ್ಯಾತ ನೃತ್ಯ ಗುರು ಸೀಮಾ ಭಾಗ್ವತ ಅವರ ಶಿಷ್ಯ ವೃಂದ ಹಾಗೂ ವಿದ್ಯಾರ್ಥಿನಿಯರು ವಿನೂತನವಾದ ಪ್ರಯೋಗ ಶಾಸ್ತ್ರೀಯ ನೃತ್ಯ ಸಮಾಗಮ,  ಜ8ರಂದು ನೃತ್ಯ ನಿಕೇತನ ಕೊಡಗೂರು ನಾಟಕ ಚಿತ್ರ ಅಂತರಾಷ್ಟೀಯ ರಂಗ ನಾಟಕೋತ್ಸವಕ್ಕೆ ಆಯ್ಕೆಯಾಗಿದ್ದು, ಅದನ್ನು ನಾವು ಎರಡನೇ ದಿವಸ ಪ್ರದರ್ಶನ ಆಗಲಿದೆ.

ಜಿಲ್ಲಾ ಮಟ್ಟದ ಪ್ರಥಮ ಪ್ರಶಸ್ತಿ ಪಡೆದ ಎಂ.ಇ.ಎಸ್. ವಾಣಿಜ್ಯ ಮಹಾವಿದ್ಯಾಲಯದ ಪುಷ್ಪರಾಣಿ ಎಂಬ ನಾಟಕ, ಖ್ಯಾತ ಸಂಗೀತ ತಜ್ಞ, ಕಿರುತೆರೆಯ ನಟ ರವಿ ಮುರೂರು ಅವರ ಭಾವವೈವಿದ್ಯ, ಸುಗಮ ಸಂಗೀತ ಖ್ಯಾತಿಯ ಸುಮಾ ಹೆಗಡೆ ಮಂಚಿಕೇರಿ, ಭಜನೆ ಹಾಗೂ ಅಭಂಗ ಗಮನ ಸೆಳೆಯಲಿವೆ.  

ದಿನಾಂಕ 8 ರಂದು ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಶಸ್ತಿ ವಿಜೇತ ನಾಟಕ, ಕುಮಾರ ಮನು ಹೆಗಡೆ ಶಾಸ್ತ್ರೀಯ ಗಾಯನ, ಪ್ರತೀಕ್ಷಾಳ ಭರತ ನಾಟ್ಯ ಪ್ರದರ್ಶನ ನಡೆಯಲಿದೆ. ಸಿತಾರ ವಾದನದಲ್ಲಿ ಪಂಡಿತ ಆರ್. ವಿ. ಹೆಗಡೆ, ಹಳ್ಳದಕೈ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.