ವಿದ್ವಾನ್ ಜಿ. ಮಹಾಬಲೇಶ್ವರ ಭಟ್ಟರಿಗೆ 'ಮಹಾಮಹೋಪಾಧ್ಯಾಯ' ಸಂಮಾನ

ಯಲ್ಲಾಪುರ: ವ್ಯಾಕರಣ ವಿದ್ವಾಂಸರೂ, ಶೃಂಗೇರಿ ಪೀಠದ ಆಸ್ಥಾನಪಂಡಿತರೂ, ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಆದ ವಿದ್ವಾನ್ ಜಿ. ಮಹಾಬಲೇಶ್ವರ ಭಟ್ಟರಿಗೆ ನವದೆಹಲಿಯ ಲಾಲ ಬಹಾದೂರ್ ಶಾಸ್ತ್ರಿ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಹಾಮಹೋಪಾಧ್ಯಾಯ ಸಂಮಾನದ ಘೋಷಣೆಯಾಗಿದೆ. ಬರುವ ಸೋಮವಾರ ಜ. 9ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಇವರು ಮೂಲತಹ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯವರಾಗಿದ್ದಾರೆ.

ಮಹಾಮಹೋಪಾಧ್ಯಾಯ:

ಯಾವ ಗುರುವಿನ ಪ್ರಶಿಷ್ಯರೂ (ಶಿಷ್ಯರ ಶಿಷ್ಯರು) ಆತನ ಅಭಿಮತಶಾಸ್ತ್ರವನ್ನು ಸಲ್ಲಕ್ಷಣವಾಗಿ ಪಾಠಮಾಡುತ್ತಿರುವರೋ ಅಂಥ ಗುರುವನ್ನು ಅಕ್ಷರಶಃ ಮಹಾಮಹೋಪಾಧ್ಯಾಯನೆಂದು ಹೇಳುತ್ತಾರೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿದು ಹಿರಿಯ ವಿದ್ವಾಂಸರಿಗೆ ಲಾಕ್ಷಣಿಕವಾದ ಬಿರುದೆಂಬಂತೆ ಸರ್ಕಾರದಿಂದ ಸಲ್ಲತೊಡಗಿತು ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.