ಸೃಜನಾತ್ಮಕ ಉದ್ಯೋಗ ಕಲ್ಪಿಸುವ ತರಬೇತಿ ಅವಶ್ಯ; ಪ್ರದೀಪ ಶೆಟ್ಟಿ

ಶಿರಸಿ: ಜೀವನ ಮೌಲ್ಯವನ್ನು ಹೆಚ್ಚಿಸುವ ಕೌಶಲ್ಯ ತರಬೇತಿಗಳು ಇಂದಿನ ಯುವಜನರ ಪ್ರಮುಖ ಆಯ್ಕೆಯಾಗಿರಬೇಕು ಎಂದು ನಗರ ಸಭೆಯ ಅಧ್ಯಕ್ಷರಾದ ಪ್ರದೀಪ ಶೆಟ್ಟಿ ಹೇಳಿದರು.

ಅವರು ಸ್ಕೊಡವೆಸ್ ಸಂಸ್ಥೆಯ ಹೆಚ್‍ಎಸ್‍ಬಿಸಿ ಜೀವನಕ್ಕಾಗಿ ಕೌಶಲ್ಯ ಕಾರ್ಯಕ್ರಮದಡಿಯಲ್ಲಿ ಬ್ಯಾಂಕಿಂಗ್ ವಲಯದ ಅಕೌಂಟ್ ಎಕ್ಸಿಕ್ಯೂಟಿವ್ ಕೋರ್ಸ್‍ನ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಶಿಕ್ಷಣ ವ್ಯವಸ್ಥೆ ಕೇವಲ ಪದವಿಯನ್ನು ನೀಡುವ ಶಿಕ್ಷಣ ವ್ಯವಸ್ಥೆಯಾಗಿ ರೂಪುಗೊಂಡಿದೆ. ಇದರಿಂದ ಯುವಜನರು ತಮ್ಮ ಜೀವನವನ್ನು ರೂಪಿಸಿಕೊಳ್ಳುವಂತ ಉದ್ಯೋಗಗಳನ್ನು ಪಡೆಯುವಲ್ಲ್ಲಿ ವಿಫಲರಾಗುತ್ತಿದ್ದಾರೆ. ಸೃಜನಾತ್ಮಕ ಉದ್ಯೋಗಗಳನ್ನು ಕಲ್ಪಿಸುವ ನಿಟ್ಟಿನಲಿ ತರಬೇತಿಗಳನ್ನು ನೀಡಬೇಕಾಗಿದೆ ಎಂದರು.

ವಕೀಲರ ಸಂಘದ ಅದ್ಯಕ್ಷರೂ ಹಾಗೂ ನ್ಯಾಯವಾದಿಗಳು ಆದ ರವೀಂದ್ರನಾಥ ನಾಯ್ಕ, ಉದ್ಯೋಗ ಗಳಿಸಬೇಕು ಎಂಬುದು ಎಲ್ಲರ ಆಕಾಂಕ್ಷೆಯಾಗಿರುತ್ತದೆ. ಆದರೆ ಉತ್ತಮವಾದ ಉದ್ಯೋಗ ಪಡೆಯಬೇಕು ಎಂದಾದರೆ ಅದಕ್ಕೆ ತಕ್ಕದಾಗ ಕೌಶಲ್ಯವನ್ನು ನಾವು ಹೊಂದಬೇಕಾಗುತ್ತದೆ ಎಂದರು.

ಸಂಸ್ಥೆಯ ಕಾರ್ಯದರ್ಶಿಗಳಾದ ವೆಂಕಟೇಶ ನಾಯ್ಕ ತರಬೇತಿಯ ಕುರಿತು ಮಾತನಾಡಿ, ಶಿಬಿರಾರ್ಥಿಗಳಾದ ಅರುಣ ಕುಮಾರ ಜೋಗಿ ಶಿವಮೊಗಾದ ಪ್ರತಿಷ್ಟಿತ ಎಕ್ಸ್‍ಚೆಂಜಿಗ್ ಎಮ್ ಎನ್ ಸಿ ಕಂಪನಿ ಹಾಗೂ ಅಂಬಿಕಾ ಮತ್ತು ಪ್ರೀಯಾ ಶೇಟ್ ಆಧಿಶಕ್ತಿ ಮೋಟಾರ್ಸ ನಲ್ಲಿ ಉದ್ಯೋಗಕ್ಕೆ ಆಯ್ಕೆ ಆಗಿದ್ದು. ಉಳಿದ ಶಿಬಿರಾರ್ಥಿಗಳು ಚೆನೈನ ಶಿವಕಾಸಿಯ ಎ2ಝೆಡ್ ಕಂಪನಿಯಲ್ಲಿ ಗೋವಾ ವಿಭಾಗದಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿರುತ್ತಾರೆ ಎಂದರು. ವೇದಿಕೆಯಲ್ಲಿ ಸ್ಕೊಡವೆಸ್ ಸಂಸ್ಥೆಯ ಆಡಳಿತಾಧಿಕಾರಿ ಸರಸ್ವತಿ ಎನ್ ರವಿ, ತರಬೇತುದಾರ ಸುಮೇಶ ಮಿರಾಶಿ ಮತ್ತು ವಿಜೇಂದ್ರ ಲಾಡ್ ಹಾಗೂ ಕೌಶಲ್ಯ ತರಬೇತಿ ವಿಭಾಗದ ಯೋಜನಾಧಿಕಾರಿ ರಿಯಾಜ್ ಸಾಗರ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.