ಎಮ್ಇಎಸ್ ಹಬ್ಬದಲ್ಲಿ ಟ್ಯಾಗೋರರ ಚಿತ್ರಾ ನಾಟಕ ಪ್ರದರ್ಶನ

ಶಿರಸಿ: ದೆಹಲಿಯ ರಾಷ್ಟ್ರೀಯ ನಾಟಕಶಾಲೆ(ಎನ್.ಎಸ್.ಡಿ.) ನಡೆಸುವ ಭಾರತರಂಗ ಮಹೋತ್ಸವ ನವದೆಹಲಿ, ಅಂತರಾಷ್ಟ್ರೀಯ ನಾಟಕೋತ್ಸವ ದೆಹಲಿಯಲ್ಲಿ ನಡೆಯಲಿದ್ದು ಶ್ರೀಪಾದ ಭಟ್ ನಿರ್ದೇಶನದ ರವೀಂದ್ರನಾಥ ಟ್ಯಾಗೋರರ ಚಿತ್ರಾ ನಾಟಕ ಅದಕ್ಕೆ ಆಯ್ಕೆಯಾಗಿದೆ. ಇದುವರೆಗೆ ಇವರ ನಿರ್ದೇಶನದ 6  ನಾಟಕಗಳು ದೆಹಲಿಯ ಉತ್ಸವಕ್ಕೆ ಆಯ್ಕೆಯಾಗಿದೆ. ಪ್ರಸ್ತುತ ನಾಟಕವನ್ನು ನೃತ್ಯನಿಕೇತನ  ಕೊಡವೂರು ಉಡುಪಿ ತಂಡದವರು ಅಭಿನಯಿಸುತ್ತಿದ್ದು ನೃತ್ಯ ಹಾಗೂ ನಾಟಕಗಳ ಸಮ್ಮಿಲನದ ಪ್ರಯೋಗವಾಗಿದೆ. ಪುರಾಣ ಕಥೆಯ ವರ್ತಮಾನದ ನೋಟವನ್ನು ಈ ನಾಟಕ ಹೊಂದಿದ್ದು ಸುಧಾ ಆಡುಕಳ ಅವರು ಕನ್ನಡ ರೂಪಾಂತರ ಮಾಡಿದ್ದಾರೆ. ಫೆಬ್ರವರಿಯಲ್ಲಿ ದೆಹಲಿ ಉತ್ಸವಕ್ಕೆ ತೆರಳಲಿರುವ ನಾಟಕ ದಿನಾಂಕ 8 ಜನವರಿ 2017ರಂದು ಎಂ.ಇ.ಎಸ್.ಹಬ್ಬದಲ್ಲಿ ಸಂಜೆ 7ಕ್ಕೆ ಶಿರಸಿಯಲ್ಲಿ ಪ್ರದರ್ಶನ ಕಾಣಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Categories: ಜಿಲ್ಲಾ ಸುದ್ದಿ

Leave A Reply

Your email address will not be published.