ವ್ಯವಹಾರ ಬಯಲಿಗೆ ತರುವಂತೆ ಮುಸ್ಲಿಂ ಸಮುದಾಯ ಪ್ರಮುಖರಿಂದ ಮನವಿ

ಶಿರಸಿ: ಸುಲಾನಿಯಾ ಹಾಗೂ ಮದೀನಾ ಮಸೀದಿಯಲ್ಲಿನ ವ್ಯವಹಾರಗಳನ್ನು ಬಯಲಿಗೆ ತಂದು ಚುನಾವಣೆಯ ಮೂಲಕ ಹೊಸ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸಮುದಾಯದ ಪ್ರಮುಖರು ಸಹಾಯ ಆಯುಕ್ತರಲ್ಲಿ ಆಗ್ರಹಿಸಿ ಮನವಿ ಸಲ್ಲಿಸಿದರು.
ಇಂದು ನಗರದ ಸಹಾಯಕ ಆಯುಕ್ತರ ಕಛೇರಿಗೆ ಆಗಮಿಸಿದ ಸಮುದಾಯದ ಪ್ರಮುಖರು ಮನವಿ ಸಲ್ಲಿಸಿ, 2001ರಿಂದ 2015ರ ತನಕ ಆಡಳಿತಾಧಿಕಾರಿಗಳು ಯಾವುದೇ ಒತ್ತಡ ಇಲ್ಲದೇ ತನಿಖೆ ನಡೆಸಿ ಸಮಾಜದ ಮುಂದೆ ತಂದೇ ಕ್ರಮ ಕೈಗೊಳ್ಳಬೇಕು. ಸುಮಾರು 200 ಕೋ.ರೂ. ಆಸ್ತಿ ಇದ್ದು ಕಳಂಕಿತರಿಗೆ ಜವಬ್ದಾರಿ ನೀಡಿದರೆ ವಿರೋಧವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಮಾಮ ಹುಸೇನ್, ಫಾರಕ ಸಾಬ್, ಮಹಮ್ಮದ್ ರಫೀಕ, ಅಲ್ಲಾಭಕ್ಷ ಹಲಗೇರಿ, ಮುನ್ನಿ ಶೇಖ,  ಅಕಬರ್ ಶೇಖ, ಉಸ್ಮಾನ ಬಿಜಾಪುರ, ಹಸನ್ ದಾವಣಗೆರೆ ಇತರರು ಇದ್ದರು. ಸಹಾಯಕ ಆಯುಕ್ತ ರಾಜು ಮೊಗವೀರ ಮನವಿ ಸ್ವೀಕರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.