ಕೃಷಿ ರಸಪ್ರಶ್ನೆ ಸ್ಪರ್ಧೆ; ಕಾನ್ಸೂರು ಪ್ರಥಮ, ಹೆಗ್ಗರಣಿ ದ್ವಿತೀಯ

ಸಿದ್ದಾಪುರ: ‘ಶ್ರಮ ಏವ ಜಯತೆ’ ಇದು ಕೃಷಿಯಲಿ ಅಕ್ಷರಶಃ ಸತ್ಯ. ರೈತನ ಬೆವರು ಹೊಲದ ಕೆಸರು, ಜೀವನ ಹಸಿರು. ಇದಕ್ಕಾಗಿ ಕೃಷಿಯನ್ನು ಉಳಿಸಿ ಬೆಳೆಸೋಣ ಎಂದು ಸಿ ಆರ್ ಹೆಗಡೆ ಕವಲಕೊಪ್ಪ ಹೇಳಿದರು.

ಮಂಗಳವಾರ ಸಿದ್ದಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲಿ ನಡೆದ ಕೃಷಿ ರಸಪ್ರಶ್ನೆ ವಿಜೇತರ ಪ್ರಶಸ್ತಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಭೂಮಿಯ, ನಮ್ಮ ಸಂಸ್ಕೃತಿಯ ರಕ್ಷಣೆಗೆ ನಾವೆಲ್ಲಾ ಮುಂದಾಗಬೇಕಿದೆ. ನಮ್ಮ ಮಕ್ಕಳಿಗೆ ಮಣ್ಣಿನ ವಾಸನೆ ತಿಳಿಯುವ ಅವಕಾಶ ಕಲ್ಪಿಸುವ ಪ್ರಯತ್ನ  ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನದ ಕೃಷಿ ಪ್ರತಿಷ್ಠಾನ ಮಾಡುತ್ತಿರುವುದು ಕರ್ನಾಟದಲ್ಲಿಯೇ ಹೆಮ್ಮೆಯ ವಿಷಯ ಎಂದರು.

ಸಿದ್ದಾಪುರ ತಾಲೂಕಾ ಮಟ್ಟದ ಶ್ರೇಷ್ಠ ಯುವ ಕೃಷಿಕ ಮಹಿಳೆ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ರೂಪಾ ಹೆಗಡೆ ಹೊಸಗದ್ದೆ ಮಾತನಾಡಿ, ಶ್ರಮ ವಹಿಸಿ ದುಡಿದರೆ ಬದುಕು ಎತ್ತರಕ್ಕೆ ಏರಲು ಸಾಧ್ಯ ಎಂದು ಹೇಳಿದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತ ಪ್ರಶಾಂತ ಬಸವರಾಜ ಗೌಡ ಕೊಂಡ್ಲಿ ಮಾತನಾಡಿ, ಜಗತ್ತಿನಲ್ಲಿ ಯಾವ ಉದ್ಯಮಕ್ಕೂ ಕಡಿಮೆ ಇಲ್ಲದ ವೃತ್ತಿ ಕೃಷಿಯಾಗಿದೆ. ರೈತ ದಿನನಿತ್ಯ ಕೃಷಿಯಲ್ಲಿ ಸಂಶೋಧನೆ ಮಾಡುತ್ತಿರುತ್ತಾನೆ. ಇವರ ಸಂಶೋಧನೆ ರೈತರ ಏಳ್ಗೆಗೆ ದಾರಿದೀಪವಾಗಿದೆ ಎಂದರು. ಕೃಷಿ ಪ್ರತಿಷ್ಠಾನದ ವಿಶ್ವಸ್ಥರಾದ ಎನ್.ಬಿ ಹೆಗಡೆ ಮಾತಾಡಿ ಕೃಷಿ ನಿರ್ಲಕ್ಷಿವಾದರೆ ನಮಗೆ ಕೇಡುಗಾಲ ಖಂಡಿತ. ಮಹಾಸಂಸ್ಥಾನ 20 ಅಂಗ ಸಂಸ್ಥೆಗಳ ಮೂಲಕ ಸಾಮಾಜಿಕ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುತ್ತಿದೆ. ಕೃಷಿಯಿಂದ ನೆಮ್ಮದಿ ಜಿವನ ನಡೆಸಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಾಳುಮೆಣಸು ಸಂಶೋಧನಾ ಕೇಂದ್ರ ಮುಖ್ಯಸ್ಥರಾದ ಡಾ| ಲಕ್ಷ್ಮೀನಾರಾಯಣ ಹೆಗಡೆ ಹಾಗೂ ಆರ್. ಹೆಚ್ ಪಾಲೇಕರ್ ಮುಖ್ಯಾಧ್ಯಾಪಕರು, ಸಿದ್ಧಿವಿನಾಯಕ ಪ್ರೌಢಶಾಲೆ ಸಿದ್ಧಾಪುರ ಉಪಸ್ಥಿತರಿದ್ದರು. ಸಿದ್ಧಿ ವಿನಾಯಕ ಪ್ರೌಢಶಾಲೆಯ ಮಕ್ಕಳು ಪ್ರಾರ್ಥಿಸಿದರು. ವಿ ಟಿ ಹೆಗಡೆ ಸ್ವಾಗತಿಸಿದರು. ರತ್ನಾಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಜಿ.ಎಸ್ ಭಟ್ ಅತಿಥಿಗಳಿಗೆ ವಂದಿಸಿದರು. ಶಿಕ್ಷಕಿ ಅನುಷಾ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸದರು.

ಪ್ರಶಸ್ತಿ ಪ್ರಧಾನ ಸಮಾರಂಭ:

ಕೃಷಿ ರಸಪ್ರಶ್ನೆಯಲ್ಲಿ ಪ್ರಥಮ ಬಹುಮಾನವನ್ನು ಕಾನ್ಸೂರಿನ ಶ್ರೀ ಕಾಳಿಕಾ ಭವಾನಿ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕುಮಾರ ನಿರಂಜನ ಹೆಗಡೆ  ಮತ್ತು ಕುಮಾರ ಪ್ರವೀಣ ಹೆಗಡೆ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಹೆಗ್ಗರಣೆಯ  ಕುಮಾರ ಮಹೇಶ್ ಹೆಗಡೆ ಮತ್ತು ಭಾರ್ಗವ ಹೆಗಡೆ ಹಾಗು ತೃತೀಯ ಬಹುಮಾನವನ್ನು ಎಂ.ಜಿ.ಸಿ.ಎಂ. ಬಿದ್ರಕಾನಿನ ಕುಮಾರಿ ತೇಜಸ್ವಿನಿ ಹೆಗಡೆ ಮತ್ತು ತನುಜಾ ಹೆಗಡೆ ತಮ್ಮದಾಗಿಸಿಕೊಂಡರು.

 .

Categories: ಜಿಲ್ಲಾ ಸುದ್ದಿ

Leave A Reply

Your email address will not be published.