ಹಿಂದೂಸ್ತಾನಿ ಶಾಸ್ತ್ರೀಯ ಗಾಯನ,ವಾದನ ವಿದ್ಯಾರ್ಥಿಗಳಿಂದ ಅರ್ಜಿಗೆ ಆಹ್ವಾನ

ಶಿರಸಿ: ಇಲ್ಲಿಯ ಶ್ರೀ ಸಾಯಿ ಸಂಗೀತ ವಿದ್ಯಾಲಯವು 2017ನೇ ಇಸ್ವಿಗೆ, ಪಂ. ರಂಗನಾಥ ಹೆಗಡೆ ಶೀಗೇಹಳ್ಳಿ ಪ್ರತಿಭಾ ಪುರಸ್ಕಾರಕ್ಕಾಗಿ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ವಾದನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ವಿದ್ಯಾರ್ಥಿಗಳು ತಮ್ಮ ಸ್ವ  ವಿವರಗಳನ್ನೊಳಗೊಂಡ ಅರ್ಜಿಯ ಜೊತೆ ಪ್ರಮಾಣಪತ್ರದ ಪ್ರತಿಗಳು, ಪಾಸ್‍ಪೋರ್ಟ  ಗಾತ್ರದ  ಫೋಟೊ, ದೂರವಾಣಿ ಮತ್ತು  ಸಂಪರ್ಕ  ವಿಳಾಸವನ್ನೊಳಗೊಂಡ ಅರ್ಜಿ ಕಳುಹಿಸಬಹುದಾಗಿದೆ. ಅಭ್ಯರ್ಥಿಗಳ ಅರ್ಜಿಗೆ ಸಂಗೀತ ಗುರುಗಳ ಶಿಫಾರಸ್ಸು  ಪತ್ರ  ಇರುವುದು ಕಡ್ಡಾಯವಾಗಿದ್ದು, ಒಂದು ಸಂಗೀತ ವಿದ್ಯಾಲಯದ ಓರ್ವ ವಿದ್ಯಾರ್ಥಿ/ನಿ ಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಜನವರಿ 31 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಆಯ್ಕೆಯಾದವರ ಹೆಸರನ್ನು ಪ್ರಕಟಿಸಿ,  ಫೆಬ್ರವರಿಯಲ್ಲಿ ನಡೆಯುವ ವಿದ್ಯಾಲಯದ ವಾರ್ಷಿಕ ಸಮ್ಮೇಳನದ ವೇಳೆಯಲ್ಲಿ  ಪ್ರತಿಭಾ ಪುರಸ್ಕಾರ  ಪ್ರದಾನ  ಮಾಡಲಾಗುವುದೆಂದು  ವಿದ್ಯಾಲಯದ  ಪ್ರಾಚಾರ್ಯರು  ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ವಿಳಾಸ : ಪ್ರಾಚಾರ್ಯರು,  ಶ್ರೀ ಸಾಯಿ ಸಂಗೀತ ವಿದ್ಯಾಲಯ, ರಾಯರಪೇಟೆ, ಶಿರಸಿ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.