ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿ; ಕಿಲಾರ ತಂಡ ಪ್ರಥಮ

ಶಿರಸಿ: ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬರೂರಿನಲ್ಲಿ ಇತ್ತೀಚಿಗೆ ನಡೆದ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಿಲಾರ ತಂಡವು ಪ್ರಥಮ ಸ್ಥಾನವನ್ನು ಹಾಗು ಕುಳವೆ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉಪೇಂದ್ರ ಪೈ, ಮುಂದಿನ ಶೈಕ್ಷಣಿಕ ವರ್ಷದಲ್ಲಿ 1000 ವಿದ್ಯಾಥಿಗಳಿಗೆ ಶಿಷ್ಯವೇತನ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಟ್ಟಿಗಳನ್ನು ಕೊಡುವುದಾಗಿ ತಿಳಿಸಿದರು. ಯಾವ ಜಾತಿ-ಮತ ಧರ್ಮಗಳ ಭೇದ ಭಾವವಿಲ್ಲದೆ ದಾನ ಮಾಡಬೇಕು. ಯುವಕರು ಸನ್ಮಾರ್ಗದಲ್ಲಿ ಸಾಗಬೇಕೆಂದು ಹೇಳಿದರು. ಎ.ಜಿ ನಾಯ್ಕ ಭರಣಿ ಮಾತನಾಡಿ ಬರೂರು ಶಾಲೆ ಸಮುದಾಯವನ್ನು ತನ್ನತ್ತ ಹೀಗೆ ಸೆಳೆಯುತ್ತ, ಶಾಲಾಭಿವೃದ್ಧಿ ಕಾರ್ಯ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ಕೇದಾರ , ಅರುಣ ಭಟ್ ಇವರನ್ನು ಇನ್‍ಸ್ಪಾಯರ್ಡ್ ಅವಾರ್ಡ್‍ದಲ್ಲಿ ದೆಹಲಿಯಲ್ಲಿ ರಾಜ್ಯದಿಂದ ಪ್ರತಿನಿಧಿಸಿದ ಬಗ್ಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಮೇಶ ನಾಯ್ಕ, ನರಸಿಂಹ ಹೆಗಡೆ ಕಲ್ಲದ್ದೆ,  ಸತೀಶ ಹೆಗಡೆ ಸ್ವಾಗತಿಸಿದರು. ಗಣಪತಿ ಪಟಗಾರ ವಂದಿಸಿದರು. ನಿರ್ಣಾಯಕರಾಗಿ ಬಿ.ವಿ ಗಣೇಶ, ಉದಯ ಹೆಗಡೆ, ಗಜೇಂದ್ರ, ಸರ್  ಹಾಗೂ ಶ್ರೀಧರ ನಾಯ್ಕ ಭಾಗವಹಿಸಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.