ಸುವಿಚಾರ

​ಕೇತಕೀಕುಸುಮಂ ಭೃಂಗಃ ಖಂಡ್ಯಮಾನೋಪಿ ಸೇವತೇ

ದೋಷಾಃ ಕಿಂ ನಾಮ ಕುರ್ವಂತಿ ಗುಣಾಪಹೃತಚೇತಸಃ |

ಕೇದಿಗೆಯ ಹೂವು ತುಂಬ ಮನೋಹರವಾದ ಪರಿಮಳವನ್ನು ಹೊಂದಿರುವಂಥದು. ಆದರೆ ಅದು ಮುಳ್ಳು ಗಿಡಗಳಿಂದ ಅರಳುವ ಹೂವು, ಸ್ವಯಂ ಅದರ ಅಂಚುಗಳಲ್ಲೂ ಮುಳ್ಳುಗಳಿರುತ್ತವೆ. ಹಾಗಿದ್ದೂ ಅದರ ಮಧು ಹೀರಲೆಂದು ಬರುವ ಭೃಂಗ ಆ ಮುಳ್ಳಿನ ಇರಿಯುವಿಕೆಯ ನೋವನ್ನು ಸಹಿಸಿಯೂ ಮುಂದುವರಿಯುತ್ತದೆ. ಅದಕ್ಕೇ ಹೇಳಿದ್ದಲ್ಲವೇ, ಒಮ್ಮೆ ಒಬ್ಬರಲ್ಲಿ ಗುಣಗಳ ಗಣಿ ಕಂಡಮೇಲೆ ಅವರಲ್ಲಿರಬಹುದಾದ ಸಣ್ಣ ಪುಟ್ಟ ದೋಷಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಎಂದು. ಗುಣ ದೊಡ್ಡದಿರುವುದು ಮುಖ್ಯ, ದೋಷಗಳೊಂದೋ ಎರಡೋ ಇರುವುದು ನಗಣ್ಯ. ’ನಿಮಜ್ಜತೀಂದೋಃ ಕಿರಣೇಷ್ವಿವಾಂಕಃ’ ಎಂಬ ಕಾವ್ಯೋಕ್ತಿಯೂ ಇಲ್ಲಿ ಸ್ಮಾರ್ಯ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.