ರಜತೋತ್ಸವದ ಅಂಗವಾಗಿ ಗಾಯನ-ವಾದನ-ಸನ್ಮಾನ ಕಾರ್ಯಕ್ರಮ

ಶಿರಸಿ: ಇಲ್ಲಿಯ ರಾಗಮಿತ್ರಾ ಪ್ರತಿಷ್ಠಾನ ಹಾಗೂ ಮಿತ್ರಾ ಮ್ಯೂಸಿಕಲ್ಸ್ ವತಿಯಿಂದ ಜ.8ರಂದು ಮುಂಜಾನೆ 9ರಿಂದ ರಾತ್ರಿ 9ರವರೆಗೆ ನಗರದ ಟಿಎಸ್‍ಎಸ್ ಸಭಾಂಗಣದಲ್ಲಿ ಗಾಯನ-ವಾದನ-ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಅದೇ ದಿನ ಸಂಜೆ 5ರಿಂದ ನಡೆಯುವ 25ನೇ ವಾರ್ಷಿಕೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ಪಾರಂಗತ ನಾಗೇಂದ್ರ ಭಟ್ಟ ಹಿತ್ಲಳ್ಳಿ ಅಧ್ಯಕ್ಷತೆ ವಹಿಸಲಿದ್ದು, ಅತಿಥಿಗಳಾಗಿ ಬನುತಾಯಿ ಕನಕಾಪುರ, ಟಿಎಸ್‍ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ, ಮಾರಿಕಾಂಬಾ ದೇವಸ್ಥಾನ ವಿಶ್ವಸ್ಥ ಮಂಡಳಿ ಅಧ್ಯಕ್ಷ ವೆಂಕಟೇಶ ನಾಯ್ಕ, ವಿಶ್ವನಾಥ ಹೆಗಡೆ ಸೋಮನಳ್ಳಿ, ಆರ್.ಎಸ್ ಹೆಗಡೆ ಭೈರುಂಭೆ, ಮಂಜುನಾಥ ಹೆಗಡೆ ಯಡಳ್ಳಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಆರ್ಟಿಸ್ಟ್ ಫೋರಂ ಹುಬ್ಬಳ್ಳಿ ಅಧ್ಯಕ್ಷ ಸುಭಾಷ್ ಮಡಿಮನ್, ಖ್ಯಾತ ಗಾಯಕ ಧನಂಜಯ ಹೆಗಡೆ, ಖ್ಯಾತ ತಬಲಾ ವಾದಕ, ರವಿಕಿರಣ ನಾಕೋಡು ಇವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಗುತ್ತದೆ. ಸಭಾ ಕಾರ್ಯಕ್ರಮದ ನಂತರ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಧನಂಜಯ ಹೆಗಡೆ ಗಾಯಕರಾಗಿ, ಪ್ರಕಾಶ ಹೆಗಡೆ ಹಾರ್ಮೋನಿಯಂ ವಾದಕರಾಗಿ, ರವಿಕಿರಣ ನಾಕೋಡ ತಬಲಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.