ಬರೂರಿನಲ್ಲಿ ಆಹ್ವಾನಿತ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಶಿರಸಿ: ಆಹ್ವಾನಿತ ಗ್ರಾಮೀಣ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ತಾಲೂಕಿನ ಬರೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜ. 1 ರವಿವಾರ ಬೆಳಿಗ್ಗೆ 9ರಿಂದ ಆಯೋಜಿಸಲಾಗಿದೆ.

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬರೂರ ನಂ. 2 ಎಸ್ ಡಿ ಎಂ ಸಿ ಹಾಗೂ ಊರ ನಾಗರೀಕರ ಸಹಕಾರದೊಂದಿಗೆ ನಡೆಯಲಿರುವ ಈ ಪಂದ್ಯಾವಳಿಗೆ ಉದ್ಘಾಟಕರಾಗಿ ಗ್ರಾಮ ಪಂಚಾಯತ ಕುಳವೆ ಅಧ್ಯಕ್ಷೆ ಚಂದ್ರಕಲಾ ನಾಯ್ಕ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಉಮೇಶ ನರಸಿಂಹ ನಾಯ್ಕ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭರತ ಹೆಗಡೆ, ಎಂ ಎಸ್ ಭಟ್ ಬೆಳಖಂಡ ಪಾಲ್ಗೊಳ್ಳಲಿರುವರು.

ಪ್ರಥಮ ಬಹುಮಾನ ₹ 5001 ಮತ್ತು ಆಕರ್ಷಕ ಟ್ರೋಪಿ, ದ್ವಿತೀಯ ಬಹುಮಾನ 3001 ಮತ್ತು ಆಕರ್ಷಕ ಟ್ರೋಪಿ ಹಾಗು ತೃತೀಯ ಬಹುಮಾನ ₹2001 ಹಾಗು ಆಕರ್ಷಕ ಟ್ರೋಪಿಯನ್ನು ನೀಡಲಾಗುವುದು. ಅದೇ ದಿನ ಸಂಜೆ ಸಮಾರೋಪ ಸಮಾರಂಭವಿದ್ದು ಉಮೇಶ ನರಸಿಂಹ ನಾಯ್ಕ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಉದ್ಯಮಿ ಉಪೇಂದ್ರ ಪೈ, ಕುಳವೆ ಗ್ರಾಪಂ ಸದಸ್ಯ ರಮೇಶ ನಾಯ್ಕ, ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಮೊಕ್ತೇಸರ ನರಸಿಂಹ ಹೆಗಡೆ ಕಲ್ಗದ್ದೆ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

Categories: ಜಿಲ್ಲಾ ಸುದ್ದಿ

Leave A Reply

Your email address will not be published.