ಬೈಕ್ ಮುಖಾಮುಖಿ ಡಿಕ್ಕಿ; ಯುವಕನೋರ್ವನ ಸಾವು

ಶಿರಸಿ: ನಗರದ ಆವೆಮರಿಯಾ ಪ್ರೌಢಶಾಲೆ ಸಮೀಪ 2 ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರರಿರ್ವರು ಗಂಭೀರ ಗಾಯಗೊಂಡ ಘಟನೆ ಬುಧವಾರ ಸಂಜೆ ಸಂಭವಿಸಿದೆ. 

ಶಿರಸಿ ಕಡೆ ಬರುತ್ತಿದ್ದ ತಾಲೂಕಿನ ತುಂಬೇಮನೆಯ ಮಂಜುನಾಥ ಹೆಗಡೆ (23) ಮತ್ತು ಶಿರಸಿ ಕಡೆಯಿಂದ ಯಲ್ಲಾಪುರದೆಡೆಗೆ ತೆರಳುತ್ತಿದ್ದ ಸಂದೇಶ ಹೆಬ್ಬಾರ (27) ಎಂಬವರ ನಡುವೆ ಅಪಘಾತ ಸಂಭವಿಸಿದ್ದು, ಮಂಜುನಾಥನಿಗೆ ಗಂಭೀರ ಗಾಯವಾದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 6 ಗಂಟೆಗೆ ಮಂಜುನಾಥ ಹೆಗಡೆ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ. ಈ ಕುರಿತು ನಗರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರೀಶಿಲಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.