ಸುವಿಚಾರ

​ಕಿಂ ಕುಲೇನ ವಿಶಾಲೇನ ಶೀಲಮೇವಾತ್ರ ಕಾರಣಂ

ಕೃಮಯಃ ಕಿಂ ನ ಜಾಯಂತೇ ಕುಸುಮೇಷು ಸುಗಂಧಿಷು |

ಒಬ್ಬನ ಮನೆ ಎಂಥದು, ಅವನ ಪೂರ್ವಜರು ಎಂಥವರು, ಅವನ ಕುಲವೆಂಥದು ಎನ್ನುವುದರ ಆಧಾರದ ಮೇಲೆ ಒಬ್ಬನ ವ್ಯಕ್ತಿತ್ವವು ನಿರ್ಭರವಾಗುವುದಿಲ್ಲ. ನಡತೆ, ವೃತ್ತ, ಸ್ವಭಾವ ಶೀಲವೆಂಬುದು ಮಾತ್ರವೇ ಒಬ್ಬನನ್ನು ನಿಶ್ಚಯಿಸುತ್ತದೆ. ಒಳ್ಳೆ ಕುಲದಲ್ಲಿ ಕೀಳು ಮಾನವರು ಹುಟ್ಟಬಾರದೆಂದೇನಿಲ್ಲವಲ್ಲ- ಸುಗಂಧಿಯಾದ, ನಯನಹಾರಿಯಾದ ಹೂವುಗಳ ಒಳಗೇ ಹುಳುಗಳು ಹುಟ್ಟುವುದನ್ನು ಕಂಡಿದ್ದೇವಷ್ಟೆ. ಕುಲದ ನೆಲೆಯಲ್ಲಿ ಯಾವನೂ ಹಿರಿಯನಾಗಲಾರ. ಕುರುಗಳ ಕುಲದ ದುರ್ಯೋಧನಾದಿಗಳಿಗೆ ಕುಲದ ಹೆಮ್ಮೆಯೇನು ಕಮ್ಮಿಯೇ? ಹಾಗಿದ್ದೂ ಕೆಡುಕಿನವರಾದರಲ್ಲ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.