ದೇಶದ ಸಮಗ್ರ ಅಭಿವೃದ್ಧಿ ಕಾಂಗ್ರೇಸ್'ನಿಂದ ಮಾತ್ರ ಸಾಧ್ಯ; ಭೀಮಣ್ಣ ನಾಯ್ಕ

ಶಿರಸಿ: ಕಾಂಗ್ರೆಸ್ ಪಕ್ಷ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಮಾತ್ರವಲ್ಲದೇ ಸಮಾನತೆ, ಸಹಬಾಳ್ವೆಯನ್ನೂ ಕಲಿಸಿ ಸಹಭಾಗಿತ್ವ ನೀಡಿದೆ. ಇದು ಕೇವಲ ಆಡಳಿತ ಮಾಡಲು ಮಾತ್ರ ಹುಟ್ಟಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು.

ಅವರು ಬುಧವಾರ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‍ನಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಸನ್ಮಾನ ನಡೆಸಿ, ಇವತ್ತಿನ ಪಕ್ಷಗಳಂತೆ ಸರ್ವಾಧಿಕಾರ ಧೋರಣೆ ಹೊಂದಿದ ಪಕ್ಷ ಇದಲ್ಲ. ದೇಶದ ಸಮಗ್ರ ಅಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎಂದರು. ಸಹಕಾರಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತಿಕೆಯಿಂದ ಕಾರ್ಯ ಮಾಡಿದ ಸಾಧಕರಿಗೆ ಸನ್ಮಾನಿಸುವ ಮೂಲಕ ಗೌರವಿಸುವದು ಸಂತೋಷ ತಂದಿದೆ ಎಂದರು.

ವೇದಿಕೆಯಲ್ಲಿ ಷಣ್ಮುಖ ಗೌಡ, ಕೆ.ಜಿ.ನಾಗರಾಜ್, ಎಸ್.ಕೆ.ಭಾಗವತ್, ರಮೇಶ ದುಭಾಶಿ, ಮಾಧವ ರೇವಣಕರ್, ಸುಮಾ ವೆರ್ಣೇಕರ್ ಇತರರು ಇದ್ದರು. ಸತೀಶ ನಾಯ್ಕ ವಂದಿಸಿದರು. ಇದೇ ವೇಳೆ ಶಕುಂತಲಾ ಜಯವಂತ, ಸತೀಶ ಎಸ್., ತುಕಾರಾಮ ನಾಯ್ಕ, ಎಚ್.ಯು.ಪಠಾಣ, ನಾಗು ಹತ್ತರಗಿ, ಮೇರಿ ರೆಬೆಲ್ಲೋ ಅವರನ್ನು ಗೌರವಿಸಲಾಯಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.