ಸುವಿಚಾರ

​ಕಲ್ಪದ್ರುಮಃ ಕಲ್ಪಿತಮೇವ ಸೂತೇ ಸಾ ಕಾಮಧುಕ್ ಕಾಮಿತಮೇವ ದೋಗ್ಧಿ

ಚಿಂತಾಮಣಿಶ್ಚಿಂತಿತಮೇವ ದತ್ತೇ ಸಂತಾಂ ತು ಸಂಗಃ ಸಕಲಂ ಪ್ರಸೂತೇ |

ಕೇಳಿದ್ದನ್ನೆಲ್ಲ ಕೊಡುವ ಮರವೊಂದಿದೆ, ಅದಕ್ಕೆ ಕಲ್ಪದ್ರುಮ ಅಂತ ಹೆಸರು. ಆ ಮರವಾದರೋ ನಾವು ಮನದಲ್ಲಿ ನೆನೆದಿದ್ದನ್ನು ಮಾತ್ರವೇ ಕೊಡುತ್ತದೆ. ಹಾಗೇ ಕಾಮಧೇನುವೆಂಬ ಹಸುವೂ ಸಹ ಕೇಳಿದ್ದನ್ನು ಮಾತ್ರವೇ ನೀಡುತ್ತದೆ. ಚಿಂತಾಮಣಿಯೆಂಬ ಸ್ಪರ್ಷಮಣಿಯೊಂದಿದೆ, ಅದು ಮನಸಿನಲ್ಲಿ ಚಿಂತಿಸಿದ್ದನ್ನು ಕೊಡುತ್ತದೆ. ಆದರೆ ಸಜ್ಜನರ ಸಂಗವೆಂಬುದು ಇದೆಯಲ್ಲ, ಅದು ಯಾವುದನ್ನೂ ಕೇಳದೆಯೂ, ನೆನೆಸದೆಯೂ, ಚಿಂತಿಸದೆಯೂ ಅದೆಲ್ಲವನ್ನೂ ಕೊಡುತ್ತದೆ. ಸಜ್ಜನರ ಸಹವಾಸಕ್ಕೆ ಅಷ್ಟು ಮಹತ್ತ್ವವಿದೆ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.