ಸುವಿಚಾರ

​ಕ್ಷುದ್ರೋ ಹಿ ಸಮಯೇ ಪ್ರಾಪ್ತೇ ಬಲಿಷ್ಠಮಪಿ ರಕ್ಷತಿ

ಪ್ರಾಜ್ಞಾ ಯೂಯಂ ವಿಜಾನೀತ ಮಾ ಮಾ ನಿಂದತ ಕಂಚನ |

ದೈಹಿಕ ಬಲ, ಆಧಿಕಾರಿಕ ಬಲ, ಹಣದ ಬಲ- ಎಂಥದೂ ಇಲ್ಲದ ಅತ್ಯಂತ ಕ್ಷುದ್ರವಾದ ಮಾನವನೂ ಸಹ ಯಾವುದೋ ಸಂದರ್ಭದಲ್ಲಿ ತುಂಬ ಸಮರ್ಥನಾದ ಬಲವಂತನೊಬ್ಬನನ್ನು ರಕ್ಷಿಸಬಲ್ಲ. ಆ ಸಮಯ ಹಾಗಿರುತ್ತದೆ. ಕ್ಷುದ್ರನಾದ ಮಾನವ ಮಾತ್ರವಲ್ಲ, ಗಣನೆಗೇ ಬಾರದ ವಸ್ತುವೂ ಸಹ ಒಂದು ಕಾಲದಲ್ಲಿ ನಮಗೆ ಜೀವದಾಯಿಯಾಗಬಹುದು. ಮುಳುಗುವವನಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವುದಿಲ್ಲವೆ? ಹಾಗೆ. ಹಾಗಾಗಿಯೇ ಪ್ರಾಜ್ಞರಾದ ಮಾನವರು ಯಾರೊಬ್ಬನನ್ನೂ ನಿಂದಿಸಿಕೂಡದು. ಯಾವುದೂ, ಯಾರೂ ಹೇಯವಲ್ಲ. ಸಮಯ ಬಂದಾಗ ಎಲ್ಲವೂ ಮಹತ್ತ್ವದ್ದೇ.

– ನವೀನ ಗಂಗೋತ್ರಿ

Categories: ಸುವಿಚಾರ

Leave A Reply

Your email address will not be published.