Slide
Slide
Slide
previous arrow
next arrow

ಸುವಿಚಾರ

300x250 AD


ಪೇಟೀಚೀವರಪಟ್ಟವಸ್ತ್ರಪಟಲಶ್ವೇತಾತಪತ್ರಚ್ಛಟಾ
ಶಾಟೀಹಾರಕಘೋಟಕಸ್ಫುಟಘಟಾಟೋಪಾಯ ತುಭ್ಯಂ ನಮಃ |
ಯೇನಾನಕ್ಷರಕುಕ್ಷಯೋಪಿ ಜಗತಃ ಕುರ್ವಂತಿ ಸರ್ವಜ್ಞತಾ
-ಭ್ರಾಂತಿಂ ಯೇನ ವಿನಾ ತು ಹಾಸ್ಯಪದವೀಂ ಸಂತೋಪಿ ಕಷ್ಟಂ ಗತಾಃ ||

ತಲೆಗೊಂದು ಪೇಟ, ರೇಶ್ಮೆವಸ್ತ್ರ, ಹೆಗಲಿಂದ ಇಳಿಬೀಳುವ ಶಾಲು, ತಲೆ ಮೇಲೆ ನೆರಳು ಸೂಸುವ ಬೆಳ್ಗೊಡೆ, ಕೊರಳಲ್ಲಿನ ಹಾರ, ಮೈಯನ್ನೆಲ್ಲ ಆವರಿಸುವ ಬೇರೆ ಬೇರೆ ವಿಧವಾದ ಭಾರೀ ಭೂರಿ ಬಟ್ಟೆಗಳು, ದೊಡ್ಡ ದೊಡ್ಡದಾಗಿ ಮೊಳಗುವ ಕಂಠಧ್ವನಿ… ಆಹಾ ಈ ಬಗೆಯ ಜನಕ್ಕೆ ನಮೋ ನಮಃ. ಈ ವೇಷಾಂಡಂಬರಗಳಿಂದಲೇ ಒಂದಕ್ಷರ ಬಾರದೇ ಇದ್ದರೂ ಕೆಲವರು ಜಗತ್ತಿನಲ್ಲಿ ತಾವು ಸರ್ವಜ್ಞರೇನೋ ಅನ್ನುವ ಭ್ರಮೆಯನ್ನು ಕಟ್ಟಿಕೊಡುತ್ತಾರೆ. ಒಳ್ಳೆಯವರಾಗಿದ್ದರೂ ಈ ಮೇಲಿನ ತೋರಿಕೆಗಳಿಲ್ಲದೇ ಇದ್ದುದಕ್ಕೆ ಕೆಲವರು ಜನರಿಂದ ಹಾಸ್ಯಾಸ್ಪದರೆಂಬಂತೆ ನೋಡಲ್ಪಡುತ್ತಿದ್ದಾರೆ. ಆಡಂಬರವಾಗಿ ವೇಷ ಮಾಡಿಕೊಂಡು ನಮ್ಮ ಟೀವಿ ಜ್ಯೋತಿಷಿಗಳಂತೆ ವರ್ತಿಸುವವರು ಮಾನವ ಸಮಾಜದಲ್ಲಿ ಎಂದೆಂದಿಗೂ ಇದ್ದರು ಅನ್ನಿಸುತ್ತದೆ.
ಶ್ರೀ ನವೀನ ಗಂಗೋತ್ರಿ

300x250 AD
Share This
300x250 AD
300x250 AD
300x250 AD
Back to top