ಉಜ್ವಲ ಭಾರತದ ನಿರ್ಮಾಣಕ್ಕೆ ಭಾರತೀಯ ಕಲೆ ಮತ್ತು ಸಂಸ್ಕತಿಯ ಕೊಡುಗೆ

ಭಾರತೀಯ ಕಲಾ ಪ್ರಾಕಾರಗಳಾದ ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದವುಗಳು ತಮ್ಮದೇ ಆದ ವೈಶಿಷ್ಟ್ಯಗಳಿಂದ ಜಗತ್ತಿನ ಗಮನ ಸೆಳೆದಿವೆ. ಜಗತ್ತಿನಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸುವಲ್ಲಿ ಕಲಾ ಪ್ರಕಾರಗಳ ಕೊಡುಗೆಯು ಪ್ರಮುಖವದುದೆಂದರೆ ಅತಿಶಯೋಕ್ತಿಯಾಗಲಾರದು. ಹಿಂದೆ ಸಾಧಕರು ಈ ವಿದ್ಯೆಗಳನ್ನು ತಮ್ಮನ್ನು ದೈವತ್ವದೆಡೆ ತೊಡಗಿಸಿಕೊಳ್ಳಲು ಸಾಧನಾ ಮಾರ್ಗವಾಗಿ ಬಳಸುತ್ತಿದ್ದರು. ಹೀಗೆ ಪುರಾತನ ಕಾಲದಿದಂದ ಬಳುವಳಿಯಾಗಿ ಬಂದ ಈ ವಿದ್ಯೆಗಳು ಇಂದು ಭಾರತದಲ್ಲಿ ಪಾಶ್ಚಿಮಾತ್ಯ ಸಂಸ್ಕತಿಯ ಪ್ರಭಾವಕ್ಕೊಳಗಾಗಿ ಕಳೆಗುಂದುತ್ತಿರುವುದು ನಿಜಕ್ಕು ಆಘಾತಕಾರಿ.

29011420292nd-musicಬ್ರೀಟೀಷರು ಭಾರತ ಪ್ರವೇಶಿಸಿದಾಕ್ಷಣ ಈ ದೇಶದ ಸಾಂಸ್ಕತಿಕ ಹಾಗೂ ಕಲಾ ಶಕ್ತಿಯನ್ನು ಕಂಡು ಬೆಚ್ಚಿ ಬಿದ್ದಿದ್ದರು. ಮೆಕಾಲೆ ಭಾರತದ ಶಕ್ತಿಯನ್ನು ಅರಿಯಲು ಮಾಡಿದ ಅಧ್ಯಯನವೇ ಇದಕ್ಕೆ ಪ್ರಮುಖ ಸಾಕ್ಷಿ. ಆತನ ಅಧ್ಯಯನದ ವರದಿಯೇ ಹೇಳಿರುವಂತೆ ಈ ದೇಶದ ಗುರುಕುಲಗಳು ನೀಡುತ್ತಿದ್ದ ಕಲೆ ಸಾಹಿತ್ಯದ ಅಗಾಧ ಜ್ಞಾನವೇ ದೇಶದ ತೀವೃಗತಿಯ ಅಭಿವೃದ್ದಿ ಹಾಗೂ ಒಗ್ಗಟ್ಟಿಗೆ ಕಾರಣವಾಗಿತ್ತು. ಬ್ರಿಟೀಷರು ತಮ್ಮ ಪ್ರಾಭುತ್ಯ ಸಾಧಿಸಲು ಮಾಡಿದ ಅತ್ಯಂತ ಸರಳ ನೀತಿಯೆ ಭಾರತೀಯ ಗುರುಕುಲಗಳ ನಾಷ ಹಾಗೂ ಭಾರತೀಯ ಕಲಾ ಪ್ರಕಾರಗಳ ಅಳಿವು. ಇದರ ಪರಿಣಾಮವೇ ದೇಶ ಇಂದಿಗೂ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಮೂಲ ಕಾರಣ.
ಯಾವುದೇ ದೇಶದ ಅಭಿವೃದ್ದಿಯನ್ನು ಆ ದೇಶದ ಸಾಂಸ್ಕತಿಕ ಹಿನ್ನೆಲೆಗಳ ಮೂಲಕವು ಮಾಪಿಸಬಹುದು. ಕಾರಣ ಸಂಸ್ಕತಿಯ ಶ್ರೀಮಂತಿಕೆಯು ಜನರ ಹೃದಯ ಶ್ರೀಮಂತಿಕೆಯನ್ನು ಬಿಂಬಿಸುವ ಮಾಧ್ಯಮವಾಗಿರುತ್ತದೆ. ಜನರ ಸಾಂಸ್ಕತಿಕ ಅಭಿರುಚಿ ಹೆಚ್ಚಿದಷ್ಟು ದೇಶದ ಉಳಿದೆಲ್ಲ ಅಂಗದ ಅಭಿವೃದ್ದಿಗಳು ಸುಲಲಿತವಾಗಿ, ಸುಸೂತ್ರವಾಗಿ ಸಾಗುತ್ತದೆ.
ಇಂದಿನ ಜೀವನ ಅತ್ಯಂತ ಜಂಜಾಟಗಳಿಂದ ಕೂಡಿದ, ಕೂತು ವಿಶ್ರಮಿಸಲೂ ಸಮಯದ ಅಭಾವವಿರುವ ಅವಿಶ್ರಾಂತ ಜೀವನ. ನಗರಗಳಲ್ಲಿ ಅತ್ಯಂತ ಸಾಮಾನ್ಯವಾದ ಈ ಬದುಕು ಜನರ ನೆಮ್ಮದಿಗೆ ಕುತ್ತು ತಂದಿರುವದೆಂಬುದೆಂದರೆ ಅತಿಶಯವಲ್ಲ. ಕೆಲಸದಿಂದ ಬಂದ ಕ್ಷಣದಿಂದ ಮರುದಿನದ ಕೆಲಸಕ್ಕೆ ಮರಳುವವರೆಗೆ ದೊರಕುವ ಕೆಲವೇ ಸಮಯದಲ್ಲಿ ಊಟ, ನಿದ್ರೆ, ಟಿವಿ, ಮೊಬೈಲ್, ಸ್ನೇಹಿತರು ಹೀಗೆ ಎಲ್ಲವೂ ಮುಗಿಸುವುದು ಅನಿವಾರ್ಯ. ಇಂತಹ ಪರಿಸ್ಥತಿಯೂ ನಮ್ಮ ಕಲೆ ಸಾಹಿತ್ಯಗಳಲ್ಲಿ ಜನರ ಅಭಿರುಚಿ ಮೂಡದಿರಲು ಕಾರಣ. ಆದ್ದರಿಂದ ದಿನದಲ್ಲಿ ದೊರಕುವ ಕೆಲವೇ ಸಮಯದಲ್ಲಿ ಎಲ್ಲಾ ರೀತಿಯ ಮನೋರಂಜನೆ ಒದಗಿಸುವ ಟಿವಿ ಮಾಧ್ಯಮದ ಪಾಶ್ಚಿಮಾತ್ಯ ಶೈಲಿಯ ಹಾಡೂ ನೃತ್ಯಗಳು ಜನರನ್ನು ಹೆಚ್ಚು ಆಕರ್ಷಿಸುತ್ತವೆಯೆ ವಿನಃ ಭೌದ್ದಿಕವಾಗಿ ವಿಷ್ಲೇಶಿಸಿ, ಅರಿತು ಅದರ ಆಳಕ್ಕಿಳಿದು ಸಂಪೂರ್ಣವಾಗಿ ಆಸ್ವಾದಿಸಬೇಕಾದ ನಮ್ಮ ಕಲಾಪ್ರಕಾರಗಳಲ್ಲವೆಂಬುದು ದುರಂತ.
ಅತ್ಯಂತ ವೈಚಾರಿಕವಾಗಿ, ಶಿಸ್ತು ಬದ್ದವಾದ ಅಧ್ಯಯನದ ಮೂಲಕವಾಗಿ ರೂಪಿತಗೊಂಡ ಭಾರತೀಯ ಕಲಾ ಪ್ರಾಕಾರಗಳು ಜನರ ಸರ್ವತೋಮುಖವಾದ ಅಭಿವೃದ್ಧಿಗೆ ಕಾರಣವಾಗುತ್ತದೆ. ಜೀವನದ ನೆಮ್ಮದಿ, ಸುಖ ಸಂತೋಷಗಳನ್ನು ಒದಗಿಸಿ ಅವಿಶ್ರಾಂತ ಜೀವನದಲ್ಲೂ, ಸಂತೋಷದ ಹೊದಕಲು ಹೊದಿಸಿ ಮನ ತಣಿಸಿ ನೆಮ್ಮದಿ ನೀಡುತ್ತವೆ.
ಇಂತಹ ಪ್ರಭುದ್ದ ಕಲಾ ಪ್ರಕಾರಗಳ ಉಳಿವಿನ ಹಾಗೂ ಬೆಳವಣಿಗೆಯ ಸಂಪೂರ್ಣ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ. ಆದರೆ ಪಾಶ್ಚಿಮಾತ್ಯರ ಸಂಸ್ಕತಿಯ ಅತೀವ ಪ್ರಭಾವಕ್ಕೆ ಸಿಲುಕಿರುವ ಯುವ ಪೀಳಿಗೆ ನಮ್ಮ ಹಿರಿಯರು ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲದೆ ಎಂಬುದು ಒಂದು ದೊಡ್ಡ ಪ್ರಶ್ನೆಯಾಗಿಯೆ ಉಳಿದಿದೆ. ಅತೀಯಾದ ನಗರೀಕರಣದೆಡೆಗಿನ ಒಲವು, ಪಾಶ್ಚಿಮಾತ್ಯತೆಯ ಬಗೆಗಿನ ಒಲವು ನಮ್ಮ ಯುವ ಜನತೆಯ ದಿಕ್ಕನೆ ಬದಲಿಸಿವೆ, ಸಂಸ್ಕಾರಕ್ಕೂ ದಕ್ಕೆ ತರಲಾರಂಭಿಸಿವೆ.
ಈ ಎಲ್ಲಾ ಅಡೆತಡೆಗಳನ್ನು ಹಿಮ್ಮಟ್ಟಿ ನಮ್ಮತನ ನಮ್ಮ ಸಂಸ್ಕತಿಯತ್ತ ಮುನ್ನುಗ್ಗೋಣ. ಸಾಂಸ್ಕತಿಕವಾಗಿ, ಆರ್ಥಿಕವಾಗಿ, ವೈಚಾರಿಕವಾಗಿ ಜಗತ್ತಿನಲ್ಲೆ ಮುಂಚೂಣಿಯಲ್ಲಿದ್ದ ನಮ್ಮ ಸ್ಥಾನವನ್ನು ಪುನಃ ಸ್ಥಾಪಿಸೋಣ, ನಮ್ಮ ಕಲಾ ಪ್ರಕಾರಗಳ ಅಭಿವೃದ್ದಿಗೆ ಶ್ರಮಿಸಿ ನಮ್ಮ ಸರ್ವತೋಮುಖ ಅಭಿವೃದ್ದಿಗೆ ಮುನ್ನುಡಿಬರೆಯೋಣ.

-ಶ್ರೀಗಣೇಶ ಹೆಗಡೆ ಉಳ್ಳಾನೆ

Categories: ಹರಿತ ಲೇಖನಿ

Tags:

Leave A Reply

Your email address will not be published.