ಯಡಳ್ಳಿಯಲ್ಲಿ ಅಪರೂಪದ ತಬಲಾ ಸೋಲೊ, ಯಕ್ಷ ಕುಂಚ- ಜೋಡಿ ಅಭಿನಯ

ಶಿರಸಿ: ಇದೇ ಮೊದಲ ಬಾರಿಗೆ ತಾಲೂಕಿನ ಸಮೀಪದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ದಿನಾಂಕ ೧೧- ಸೋಮವಾರ ಸಂಜೆ ೫.೩೦ ಕ್ಕೆ ತಬಲಾ ಸೋಲೊ, ಮತ್ತು ಜೋಡಿ ಹಾಡು- ಯಕ್ಷ ಕುಂಚ- ಜೋಡಿ ಅಭಿನಯಗಳನ್ನು ಒಳಗೊಂಡಿರುವ ಒಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಂ. ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್, ಜನನಿ ಮ್ಯೂಸಿಕ್ ಸಂಸ್ಥೆ, ಶಿರಸಿ ಹಾಗೂ ರಾಷ್ಟ್ರೀಯ ಸೇವಾ ಯೊಜನೆ ಘಟಕ, ಯಡಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಈ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Untitled-1
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್ ವಿ ಹೆಗಡೆ ಕಾನಗೋಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಜಿ.ಎಮ್.ಹೆಗಡೆ ಮುಳಖಂಡ ಹಾಗೂ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪುರೋಹಿತರು ಹಾಗೂ ಯಕ್ಷ ಕಲಾವಿದರು ಆದ ಶ್ರೀ ಶ್ರೀಧರ ಭಟ್ಟ ಕರಸುಳ್ಳಿ ಇವರಿಗೆ ಸನ್ಮಾನಿಸಲಾಗುವುದು.
ನಂತರ ನಡೆಯುವ ಕಾರ್ಯಕ್ರಮದಲ್ಲಿ ರಾಘವೇಂದ್ರ ಆಚಾರ್ಯ ಹಾಗೂ ಕೇಶವ ಹೆಗಡೆ ಕೊಳಗಿಯವರ ಜೋಡಿ ಹಾಡು ಕಾರ್ಯಕ್ರಮ, ಯಕ್ಷ ಕುಂಚ ಕಾರ್ಯಕ್ರಮ, ಹಾಗೂ ಶ್ರೀ ಕಾರ್ತೀಕ ಚಿಟ್ಟಾಣಿ, ಶ್ರೀ ಸುಧೀರ್ ಉಪ್ಪೂರ್ ಇವರ ಜೋಡಿ ಅಭಿನಯ ಕಾರ್ಯಕ್ರಮ ಜರುಗಲಿದೆ. ಹಾಗೆ ಶ್ರೀ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ಹಾಗೂ ಶ್ರೀ ಪ್ರಕಾಶ ಹೆಗಡೆ ಯಡಳ್ಳಿ ಇವರ ತಬಲಾ-ಹಾರ್ಮೋನಿಯಂ ಸೋಲೋ ಕಾರ್ಯಕ್ರಮ ಜರುಗಲಿದ್ದು ಹೆಚ್ಚಿನ ಮಾಹಿತಿಗಾಗಿ ಗಿರಿಧರ ಕಬ್ನಳ್ಳಿ ಇವರನ್ನು ಸಂಪರ್ಕಿಸಬಹುದು. ದೂ. 9480018899

Categories: ಜಿಲ್ಲಾ ಸುದ್ದಿ

2 Comments

Leave A Reply

Your email address will not be published.