Slide
Slide
Slide
previous arrow
next arrow

ಸುವಿಚಾರ

300x250 AD

ಯದಾ ಕಿಂಚಿಜ್ಞೋಹಂ ದ್ವಿಪ ಇವ ಮದಾಂಧಃ ಸಮಭವಮ್
ತದಾ ಸರ್ವಜ್ಞೋಸ್ಮೀತ್ಯಭವದವಲಿಪ್ತಂ ಮಮ ಮನಃ |
ಯದಾ ಕಿಂಚಿತ್ಕಿಂಚಿದ್ಬುಧಜನಸಕಾಶಾದವಗತಃ
ತದಾ ಮೂರ್ಖೋಸ್ಮೀತಿ ಜ್ವರ ಇವ ಮದೋ ಮೇ ವ್ಯಪಗತಃ |
ತಾನು ಅಲ್ಪಜ್ಞಾನಿಯಾಗಿದ್ದಕಾಲದಲ್ಲಿ ತನಗೇ ಎಲ್ಲ ತಿಳಿದಿದೆಯೆನ್ನುವ ಭ್ರಮೆಯಲ್ಲಿ ಆನೆಯಂತೆ ನನಗೊಂದು ಮದ ಇತ್ತು. ನನ್ನ ಮನಸಂತೂ ತನಗೇ ಎಲ್ಲವೂ ತಿಳಿದಿದೆಯೆನ್ನುವ ಅಹಂಕಾರವನ್ನು ಹೊಂದಿತ್ತು. ಆದರೆ ಕಾಲ ಕಳೆದಂತೆ ತಿಳಿದವರ ಸಂಗದಿಂದಾಗಿ ಸ್ವಲ್ಪ ಸ್ವಲ್ಪವೇ ತಿಳಿವು ನನ್ನದಾಗತೊಡಗಿತೋ, ಆಗ ತಾನು ಮೂರ್ಖನೆನ್ನುವುದು ಅರಿವಿಗೆ ಬಂದು ಜ್ವರದಂತೆ ಮೈಗೆಲ್ಲ ಏರಿದ್ದ ಮದವು ಇಳಿದುಹೋಯ್ತು. ಸುಭಾಷಿತಕಾರ ಇದನ್ನೆಲ್ಲ ತನಗೇ ಎಂಬಂತೆ ಹೇಳಿಕೊಂಡಿದ್ದರೂ ವಾಸ್ತವದಲ್ಲಿ ಈ ಮಾತುಗಳು ಶತಶಃ ನಮ್ಮೆಲ್ಲರಿಗೂ ಅನ್ವಯಿಸುವಂಥದು ಎನ್ನಲಡ್ಡಿಯಿಲ್ಲ.
ಶ್ರೀ ನವೀನ ಗಂಗೋತ್ರಿ

300x250 AD
Share This
300x250 AD
300x250 AD
300x250 AD
Back to top