ಮೂಲಭೂತ ಸೌಕರ್ಯಕ್ಕೆ ಮಹೇಶ ನಾಯ್ಕ ಕಂಡ್ರಾಜಿ ಆಗ್ರಹ

ಶಿರಸಿ ತಾಲೂಕಿನ ಬೀಳೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೌಚಾಲಯ ಸೌಲಭ್ಯ ಇಲ್ಲದಿರುವುದು ಮುಜುಗರದ ಸಂಗತಿಯಾಗಿದ್ದು, ತಕ್ಷಣವೇ ಅರ್ಧಕ್ಕೆ ನಿಂತಿರುವ ಶೌಚಾಲಯದ ಕಟ್ಟಡ ಕಾಮಗಾರಿಯನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ಶಾಸಕರು ಸಂಭಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಲಿ ಎಂದು ಪ್ರಜಾಸತ್ತಾತ್ಮಕ ಪದವೀಧರರ ವೇದಿಕೆ ಸ್ಥಳೀಯ ಘಟಕದ ಅಧ್ಯಕ್ಷ ಮಹೇಶ ನಾಯ್ಕ ಕಂಡ್ರಾಜಿ ಆಗ್ರಹಿಸಿದ್ದಾರೆ.
ಕಾಲೇಜು ಸ್ಥಾಪನೆಯಾಗಿ ಆರು ವರ್ಷಗಳು ಕಳೆದರೂ ಗ್ರಂಥಾಲಯ,ಶೌಚಾಲಯ ಸೇರಿದಂತೆ ಇನ್ನೀತರ ಮೂಲಭೂತ ಸೌಕರ್ಯ ದೊರೆಯದಿರುವುದು ವಿಷಾದನೀಯ. ಈ ಸಮಸ್ಯೆಯಿಂದಾಗಿ ಮನೆಯಿಂದ ಕಾಲೇಜಿಗೆ ಬರುವ ಕೆಲವು ಹೆಣ್ಣುಮಕ್ಕಳು ನೀರು ಕುಡಿದು ಬರಲು ಹೆದರಿದರೆ ಇನ್ನೂ ಹಲವರು ಬಯಲು ಶೌಚಕ್ಕೆ ಹೊಂದಿಕೊಂಡಿದ್ದಾರೆ. ಈ ಕುರಿತಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಗಮನಹರಿಸಬೆಕು ಎಂದು ಅವರು ಹೇಳಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.