ಉಳಿತಾಯವನ್ನು ಭದ್ರತೆ ಇರುವಲ್ಲಿ ಮಾಡಬೇಕು : ಪದ್ಮನಾಭ

ಸರಿಯಾದ ಉಳಿತಾಯವಿದ್ದಲ್ಲಿ ಮಾತ್ರ ನಮ್ಮ ಯೋಜನೆಗಳನ್ನು ನಿರೀಕ್ಷೆಯಂತೆ ಕಾರ್ಯಗತಗೊಳಿಸಲು ಸಾದ್ಯ, ಉಳಿತಾಯಗಳನ್ನು ಭದ್ರತೆ ಇರುವಲ್ಲಿ ಮಾಡಬೇಕು ಎಂದು ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ತಾಲೂಕಿನ ಬೀಳೂರಿನ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು. ವಿದ್ಯಾರ್ಥಿಗಳಲ್ಲಿ ಉಳಿತಾಯದ ಅರಿವು ಎಂಬ ವಿಷಯವನ್ನು ಕುರಿತು ಉಪನ್ಯಾಸ ನೀಡಿದ ಅವರು ’ಅಲ್ಪಕಾಲಿನ ಉಳಿತಾಯಕ್ಕೆ ಬ್ಯಾಂಕ್ ಅಥವಾ ಅಂಚೆ ಕಛೇರಿ ಉತ್ತಮ ಆದರೆ ದೀರ್ಘಕಾಲಿನ ಉಳಿತಾಯಕ್ಕೆ ಜೀವ ವಿಮೆ ಅತ್ಯಂತ ಸೂಕ್ತವಾದುದು. ಇಲ್ಲಿ ವ್ಯಕ್ತಿಯ ಉಳಿತಾಯದ ಹಣಕ್ಕೆ ಬೋನಸ್ ಜೊತೆ ವ್ಯಕ್ತಿಯ ಜೀವಕ್ಕೆ ವಿಮೆ ಕೂಡ ಇರುತ್ತದೆ, ಹೀಗಾಗಿ ಇದು ಕುಟುಂಬದ ಅತ್ಯುತ್ತಮ ಉಳಿತಾಯವಾಗುತ್ತದೆ ಎಂದರು. ಕಾಲೇಜಿನ ಪ್ರಾಚಾರ್ಯರಾದ ಅರ್ ಜಿ ಭಟ್ಟ ಪ್ರಾಸ್ತವಿಕ ಮಾತಾಡಿ ಸ್ವಾಗತಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.