ಗೋಳಿಯಲ್ಲಿ ರಾಜ್ಯ ಮಟ್ಟದ ಕಾರ್ಯಗಾರ

ಪಾರಂಪರಿಕ ವೈದ್ಯ ಪರಿಷತ್ ಶಿರಸಿ ಘಟಕ ಹಾಗು ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ ಸಮಿತಿ ಗೋಳಿ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ತಾಲ್ಲೂಕು ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ತಾಲೂಕಿನ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಗೋಳಿಯಲ್ಲಿ ದಿನಾಂಕ ೪-೧೨-೨೦೧೫ ಶುಕ್ರವಾರ ಬೆಳಿಗ್ಗೆ ೧೦.೩೦ ಕ್ಕೆ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಶ್ರೀ ಪ್ರಸನ್ನಾಥ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ ಎನ್ ಶ್ರೀಕಂಠಯ್ಯ, ಪ್ರೊ. ಜಿ. ಹರಿರಾಮಮೂರ್ತಿ, ಶಾಂತಾರಾಮ ಹೆಗಡೆ, ವಿ ಆರ್ ಭಟ್ಟ ಸೇರಿದಂತೆ ಗಣ್ಯರು ಉಪಸ್ಥಿತರಿರುವರು.
ದಿನಾಂಕ ೫-೧೨-೨೦೧೫ ಶನಿವಾರ ಮಧ್ಯಾಹ್ನ ೧೨ ಘಂಟೆಗೆ ಈ ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶ್ರೀ ಮಹಾಂತರುದ್ರೇಶ್ವರ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಮಾರೋಪ ಭಾಷಣಕಾರರಾಗಿ ಶಿವರಾಮ್ ಹೆಬ್ಬಾರ್, ಮುಖ್ಯ ಅತಿಥಿಗಳಾಗಿ ಡಾ. ಸತ್ಯನಾರಾಯಣ ಭಟ್, ಉಪೇಂದ್ರ ಪೈ, ಡಾ. ಸುಭಾಷ್, ಅಶೋಕ ಹಾಸ್ಯಗಾರ ಮುಂತಾದ ಮಹನೀಯರು ಉಪಸ್ಥಿತರಿರುವರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.