'ಸುಗಮ್ಯ ಭಾರತ್' ವಿಶೇಷ ಲೋಗೊಕಾ ವಿಕಾಸ್

ಸುಗಮ್ಯ ಭಾರತ್ ವಿಕಲಚೇತನರ ಸಮಗ್ರ ಅಭಿವೃದ್ಧಿ ಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮಹತ್ವದ ಯೋಜನೆಯಾಗಿದೆ. ಅಂಗವಿಕಲರಿಗೆ ನೂತನ ತಂತ್ರಜ್ಞಾನ ಕೈಗೆಟಕುವಂತೆ ಪ್ರತಿಯೊಬ್ಬರಿಗೂ ತಲುಪಿಸುವುದು ಆ ಮೂಲಕ ಅವರ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗೆ ಪರಿಹಾರ ನೀಡಿ ಅವರ ದಿನನಿತ್ಯದ ತೊಂದರೆಗಳನ್ನು ದೂರ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶ. ಸರ್ಕಾರಿ ಕಚೇರಿ ಹಾಗು ಸಾರ್ವಜನಿಕ ಸ್ಥಳ ಗಳಲ್ಲಿ ಅಂಗವಿಕಲರು ಸುಗಮವಾಗಿ ಸಂಚರಿಸಲು ಅನುಕೂಲಮಾಡಿಕೊಡುವ ಮಹತ್ವದ ಗುರಿ ಮತ್ತು ಧ್ಯೇಯ ಹೊಂದಿರುವ ಯೋಜನೆ ಇದಾಗಿದೆ.

ಸರ್ಕಾರಿ ಕಛೇರಿಯಲ್ಲಿ ಅಂಗವಿಕಲರು ಸುಗಮವಾಗಿ ಸಂಚರಿಸಲು ಪ್ರತ್ಯೇಕ ಯೋಜನೆಯನ್ನು ಕೇಂದ್ರ ಸರ್ಕಾರವೇ ರೂಪಿಸಬೇಕು ಎಂದಾದರೆ ನಮ್ಮ ಅಧಿಕಾರಿಗಳ ಸಾಮಾನ್ಯ ತಿಳುವಳಿಕೆ ಎಲ್ಲಿ ಹೋಗಿತ್ತು ಎಂಬ ಪ್ರಶ್ನೆ ಮೂಡುತ್ತದೆ. ಪಿಂಚಣಿ ವಾಹನ ಸ್ವ ಉದ್ಯೋಗಕ್ಕೆ ಸಾಲ ಇದನ್ನು ಹೊರತುಪಡಿಸಿ ಯಾವುದಾದರೂ ಹೊಸ ಯೋಜನೆಯನ್ನು ರೂಪಿಸಿದ್ದಿರೋ? ರಾಜಕಾರಣಿಗಳು ಯೋಜನೆ ರೂಪಿಸಲು ಅವಕಾಶ ಕೊಡದಿದ್ದರೆ 10 ಜನರ ಅಧಿಕಾರಿಗಳ ತಂಡದ ಮೂಲಕ ನಿಮ್ಮ ಉಳಿತಾಯದ ಹಣದಲ್ಲಿ ಒಬ್ಬ ಅಂಗವಿಕಲನಿಗಾದರೂ ಆದಾಯದ ಮೂಲ ಬರುವಂತೆ ಕ್ರಮ ಕೈಗೊಂಡಿದ್ದೀರಾ ? ಇದನ್ನೆಲ್ಲಾ ಕೇಳುತ್ತಿರುವುದು ನಾನಲ್ಲ ತಾಯಿ ಭಾರತಿ. ಯಾವ ತಾಯಿ ಭಾರತೀಯ ಹೆಸರಿನ ಮೂಲಕ ನೀವು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆದಿದ್ದಿರೋ ಆ ತಾಯಿ ಭಾರತೀಯ ಪ್ರಶ್ನೆಗೆ ನೀವು ಉತ್ತರಿಸುತ್ತೀರಿ ಎಂದು ನಂಬಿದ್ದೇನೆ.
ವಿಕಲ ಚೇತನರ ಬಗ್ಗೆ ನಿಮಗಿರುವ ಆಸಕ್ತಿ ಮತ್ತು ಅವರು ಸಮಾಜದಲ್ಲಿ ಉನ್ನತ ಜೀವನ ಸಾಗಿಸಬೇಕು ಎಂದು ನೀವು ಕಂಡಿರುವ ಕನಸು ನನಸಾಗಲಿ. ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಸುಗಮ್ಯ ಭಾರತ್ ಯೋಜನೆ ಯಶಸ್ವಿಯಾಗಲಿ. ಆಲ್ ದಿ ಬೆಸ್ಟ್ ಮೋದಿ ಜೀ. .
ಡಿಸೆಂಬರ್ 3 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಗಮ್ಯ ಭಾರತ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಕಲ ಚೇತನರ ಏಳ್ಗೆಗೆ ಎಲ್ಲರೂ ಶ್ರಮಿಸೋಣ.
ಹಮಾರೆಸಾಥ್ ವಿಶೇಷ ಲೋಗೊಕಾ ವಿಕಾಸ್
– ಅಕ್ಷತ್ ಹೆಗಡೆ ಶಿರಸಿ

Categories: ಹರಿತ ಲೇಖನಿ

Leave A Reply

Your email address will not be published.