‘ನೀನಾಸಂ’ನಿಂದ ಶಿರಸಿಯಲ್ಲಿ ರಂಗೋತ್ಸವ

ಅಂಕಸಂಸಾರ ಶಿರಸಿ ಇವರ ಆಶ್ರಯದಲ್ಲಿ ನೀನಾಸಂ ತಿರುಗಾಟದ ಎರಡು ನಾಟಕಗಳು ಶಿರಸಿಯ ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯುತ್ತದೆ. ಇದೇ ನವೆಂಬರ್ ತಿಂಗಳ ದಿನಾಂಕ 22 ಭಾನುವಾರದಂದು ‘ಗುಣಮುಖ’ ಹಾಗೂ 23 ಸೋಮವಾರ ‘ತಾರ್ತೂಫ್’ ನಾಟಕಗಳು ಪ್ರತಿದಿನ ಸಂಜೆ 7 ಗಂಟೆಗೆ ಆರಂಭವಾಗುತ್ತದೆ.

ಪ್ರವೇಶ ದರ ರೂ. 100 ಹಾಗೂ ರೂ. 50, ಸೀಸನ್ ಟಿಕೆಟ್ ರೂ. 150 (ಎರಡು ದಿನಕ್ಕೆ) ಇದ್ದು ಎಲ್ಲಾ ಟಿಕೆಟ್‍ಗಳು ‘ಹೆಗಡೆ ಬ್ರದರ್ಸ್’ (ಸಾಮ್ರಾಟ್ ರಿಪ್ರೇಷ್‍ಮೆಂಟ್) ಇವರಲ್ಲಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಶ್ರೀ ರಮಾನಂದ ಐನಕೈ (9449912270) ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಎಲ್ಲ ಕಲಾಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.