ಸುಭಾಷಿತ

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ

ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ? ||

ಪ್ರಿಯವಾದ ಮಾತುಗಳನ್ನಾಡುವುದರಿಂದ ಮನುಷ್ಯ ಮಾತ್ರವಲ್ಲ, ನಾಯಿ ಗೋವುಗಳಂತಹ ಮೂಕ ಪ್ರಾಣಿಗಳೂ ಆನಂದವನುಭವಿಸುತ್ತವೆ. ಹಾಗಾಗಿ ಮಾತಾಡುವಾಗೆಲ್ಲ ಅದು ಪ್ರಿಯವಾಗುವಂತೆಯೇ ಇರಬೇಕು. ಅಷ್ಟಕ್ಕೂ ಮಾತಿಗೆ ಬಡತನವೆಂಬುದು ಇಲ್ಲ ತಾನೆ? ಒಳಿತಿನ ಮಾತು ಪ್ರತಿಯೊಬ್ಬ ಜೀವಿಗೂ ಹಿತದ ಅನುಭವವನ್ನೇ ಕೊಡುತ್ತದೆ.

-ನವೀನ್ ಗಂಗೋತ್ರಿ

Categories: ಸುವಿಚಾರ

Tags:

Leave A Reply

Your email address will not be published.