ರಂಗನಗರಿಯಲ್ಲಿ ರಂಗೇರಿದ ಸಂಸ್ಕೃತಿ ಉತ್ಸವ

ರಂಗ ಕಲೆಯಲ್ಲಿ ಹೆಸರು ಮಾತಾಗಿರುವ ಮಂಚಿಕೆರಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಂಸ್ಕೃತಿ ಉತ್ಸವ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ರಂಗ ಕರ್ಮಿ ಶ್ರೀನಿವಾಸ ಜಿ ಕಪ್ಪಣ್ಣರವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

IMG-20151117-WA0013
ಬೆಳಗಿನ ಸಂವಾದ ಗೋಷ್ಠಿಯಲ್ಲಿ ರಾಮಕೃಷ್ಣ ಭಟ್ ದುಂಡಿ, ಶ್ರೀಧರ್ ಬಳಗಾರ, ನಾ.ಸು. ಭರತನಹಳ್ಳಿ, ಪ್ರೋ. ರಾಜು ಹೆಗಡೆ ಮತ್ತು ಪ್ರಮೋದ ಹೆಗಡೆ ಮುಂತಾದ ಮಹನಿಯರು ಪಾಲ್ಗೊಂಡಿದ್ದರು.
ಸಂಜೆ ನಡೆದ ಹಿಂದುಸ್ತಾನಿ ಗಾಯನದಲ್ಲಿ ಅನಿತಾ ಹೆಗಡೆ ಬೆಂಗಳೂರು ಹಾಗೂ ಖ್ಯಾತ ಗಾಯಕಿ ವಿ. ಪೂರ್ಣಿಮಾ ಭಟ್ ಕುಲ್ಕರ್ಣಿ ತಮ್ಮ ಗಾಯನ ಪ್ರಸ್ತುತ ಪಡಿಸಿದರು. ಇವರಿಗೆ ತಬಲಾ ಶ್ರೀ ಗೋಪಾಲಕೃಷ್ಣ ಕಲಭಾಗ ಹಾಗೂ ಸಂವಾದಿನಿಯಲ್ಲಿ ಶ್ರೀ ಗೌರೀಶ್ ಯಾಜಿ ಸಹಕರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.