ಬಿಳಗಿಯ ಐತಿಹಾಸಿಕ ಸ್ಥಳಗಳು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲುಕಿನ ಸಮೀಪದ ಬಿಳಗಿ ಇತಿಹಾಸ ಪ್ರಸಿದ್ದ ಸ್ಥಳಗಳಲ್ಲಿ ಒಂದು. ಹಿಂದೆ ಬಿಳಗಿಯನ್ನಾಳುತ್ತಿದ್ದ ಸಾಮಂತ ಅರಸರು ನಿರ್ಮಿಸಿದ ಗೋಲ್ ಬಾವಿ ಹಾಗೂ ಜೈನರ ಬಸದಿಗಳು ಇಲ್ಲಿನ ಪ್ರಮುಖ ಆಕರ್ಷಣೆ. ಬಿಳಗಿಯ ಗೋಲ್ ಬಾವಿಯ ನಾಲ್ಕು ದಿಕ್ಕುಗಳಲ್ಲಿ ಸುರಂಗಗಳಿದ್ದು ಅದನ್ನು ಈಗ ಸುರಕ್ಷಾ ದೃಷ್ಟಿಯಿಂದ ಮುಚ್ಚಲಾಗಿದೆ. ಇದು ಅರಸರು ಶತ್ರುಗಳಿಂದ ತಮ್ಮ ರಕ್ಷಣೆಗಾಗಿ ಸುರಂಗದ ಮೂಲಕ ಸುಮಾರು ೧೦ ಕಿ.ಮಿ ದೂರದ ಇಟಗಿ ಹಾಗೆ ಮೊದಲಾದ ಸ್ಥಳಗಳಿಗೆ ತಲುಪಲು ಮಾಡಿಕೊಂಡ ವ್ಯವಸ್ಥೆಯಾಗಿತ್ತೆಂಬುದು ಇತಿಹಾಸ.

Golbavi2Golbavi1

ಹಾಗೆ ಜೈನ ಬಸದಿಯು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಭಾರತೀಯ ಪುರಾತತ್ವ ಇಲಾಖೆಯ ಅಡಿಯಲ್ಲಿ ಬರುವ ಈ ದೇವಾಲಯ ಅಂದಿನ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಅತ್ಯಂತ ಸುಂದರ ತಾಣವಾಗಿದೆ.

JainBasdi2

ತಲುಪಲು ದಾರಿ

 

ಸಿದ್ದಾಪುರದಿಂದ ಸುಮಾರು ೧೫ ಕಿ.ಮಿ ದೂರವಿರುವ ಬಿಳಗಿಗೆ ಮೂಲಭೂತ ಸೌಕರ್ಯಗಳ ಯಾವುದೇ  ಕೊರತೆಯಿಲ್ಲ. ಸಿದ್ದಾಪುರದಿಂದ ಬಿಳಗಿಗೆ ಬಸ್ ವ್ಯವಸ್ಥೆಯಿದ್ದು ಬಿಳಗಿಯಿಂದ ಈ ತಾಣಗಳು ಕಾಲ್ನಡಿಗೆಯ ದೂರದಲ್ಲಿವೆ. ಸುಮಾರು ೪೦ ಕಿ.ಮಿ ದೂರದಲ್ಲಿ ತಾಲ್ಗುಪ್ಪಾ ರೈಲ್ವೆ ನಿಲ್ದಾಣವಿದ್ದು, ದೂರದ ಪ್ರವಾಸಿಗರು ಬರಲು ಅನುಕೂಲವಾಗಿದೆ.ಸಿದ್ದಾಪುರವು ಹತ್ತಿರವಾದ್ದರಿಂದ ಪ್ರವಾಸಿಗರಿಗೆ ಮೂಲಭೂತ ವ್ಯವಸ್ಥೆಗಳ ಯಾವುದೇ ಕೊರತೆಯಿಲ್ಲ.

ಇದೇ ಮಾರ್ಗದಲ್ಲಿ ಮುಂದೆ ಕೆಲವು ಅತ್ಯುತ್ತಮ ಜಲಪಾತಗಳಿದ್ದು ಒಂದು ದಿನದ ಮೋಜಿನ ಪ್ರವಾಸಕ್ಕೆ ಯಾವುದೆ ಕೊರತೆಯಿಲ್ಲ.!

Categories: ನಮ್ಮ ಹೆಮ್ಮೆಯ ತಾಣಗಳು

Leave A Reply

Your email address will not be published.