ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಮತ್ತು ವಿಸ್ತಾರಕ್ಕಾಗಿಕಾರ್ಯಪ್ರವೃತ್ತ ಉಪಾಯಗಳು

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು..”ಕೆಲವು ದಶಕಗಳ ಹಿಂದೆಕನ್ನಡಕವಿಯೊಬ್ಬರಿಂದರಚನೆಗೊಂಡಕವನದ ಸಾಲು ಇದು.ಅಂದಿನಿಂದ ಇಂದಿನವರೆಗೂ ಈ ಹಾಡು ಪ್ರಸ್ತುತವಾಗಿದೆ.ಇವತ್ತಿಗೂಕೂಡ ನಾವು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡುಎಂದೇ ಹೇಳುತ್ತಿದ್ದೇವೆ. ಭೌಗೋಳಿಕವಾಗಿ ನಾಡುಉದಯವಾಗಿದ್ದರೂ, ಈ ನೆಲದ ಭಾಷೆ, ಸಂಸ್ಕøತಿಗಳ ಚಿತ್ರಣ ಬದಲಾಗುತ್ತಿದೆ.ನೆಲ, ಭಾಷೆ, ಸಂಸ್ಕøತಿಯ ಉಳಿಯುವಿಕೆಗೆ ಬೆಳೆಯುವಿಕೆಗೆ ನಾವು ಅವಿರತವಾಗಿ ಪ್ರಯತ್ನ ಪಡುತ್ತಿದ್ದೇವೆ.
ಜಾಗತೀಕರಣದ ಅಲೆಯಲ್ಲಿ ತೇಲುತ್ತಿರುವ ನಮ್ಮೆಲ್ಲರಿಂದ ಪ್ರಮುಖವಾಗಿ ಇಂದು ದೂರವಾಗುತ್ತಿರುವುದು ಪ್ರಾದೇಶಿಕ ಭಾಷೆ ಮತ್ತು ಸಂಸ್ಕøತಿ.ಸಂಸ್ಕøತಿ-ಸಂಪ್ರದಾಯಗಳು ನಮ್ಮಜೀವನ ಶೈಲಿಯೊಂದಿಗೆ ಬೆರೆತುಕೊಂಡು ಬಂದಿರುವಂತಹವು. ಅವು ನಮ್ಮನ್ನು ಬಹುಬೇಗ ಬಿಟ್ಟು ಹೋಗಲಾರವು!ಆದರೆ ಭಾಷೆಎನ್ನುವುದು ಹಾಗಲ್ಲ.ಅದು ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬಹುಬೇಗ ನಮ್ಮನ್ನು ರೂಪಾಂತರಗೊಳಿಸುತ್ತದೆ.ಅಂಬೆಗಾಲಿಟ್ಟು, ತೊದಲು ನುಡಿವಾಗಿನ ಭಾಷೆ ಹೊರಜಗತ್ತಿನ ಸಂಪರ್ಕಕ್ಕೆ ಬಂದೊಡನೆ ಬದಲಾವಣೆಗೊಳ್ಳುತ್ತದೆ.ಇಂದುನಮ್ಮಕನ್ನಡ ಭಾಷೆಗೆ ಆಗಿರುವುದು ಕೂಡಇದೇ ಪರಿಸ್ಥಿತಿ.ಆಧುನಿಕ ಜಗತ್ತಿನ ಸಂಪರ್ಕ, ಭರಾಟೆ ಅಧಿಕಗೊಳ್ಳುತ್ತಿದ್ದಂತೆ ನಾವು ಕನ್ನಡ ನಮ್ಮ ಭಾಷೆಎನ್ನುವುದನ್ನು ಮರೆತುಬಿಟ್ಟಿದ್ದೇವೆ.ಕನ್ನಡ ಭಾಷೆಯನ್ನು, ಕನ್ನಡ ಸಾಹಿತ್ಯವನ್ನುಕಡೆಗಣಿಸುತ್ತಿದ್ದೇವೆ. ಬದುಕಿಗೆಇಂಗ್ಲಿಷ್ ಭಾಷೆಅಗತ್ಯಎನ್ನವುದು ಸತ್ಯ.ಆದರೆಅದರಿಂದ ನಮ್ಮ ಭಾಷಾ ಸಂಸ್ಕøತಿಯನ್ನು ನಾವು ತೊರೆಯಬೇಕುಎನ್ನುವುದು ನಾವು ಸೃಷ್ಟಿಸಿಕೊಂಡಿದ್ದು.ಆ ದಿಶೆಯಲ್ಲಿ ಬಹುದೂರ ಹೆಜ್ಜೆಯನ್ನೂ ಹಾಕಿದ್ದೇವೆ. ನಮ್ಮ ಈ ಕಾರ್ಯ ಎಷ್ಟು ಸರಿಎಂದು ನಾವು ಚಿಂತಿಸಲೇ ಬೇಕು.ನಮ್ಮ ಮಾತೃ ನುಡಿಯರಕ್ಷಣೆ, ಅದರ ಮೌಲ್ಯಗಳ ರಕ್ಷಣೆ ನಮ್ಮಜವಾಬ್ದಾರಿ.ನಮ್ಮನ್ನು ನಾವೇ ಮರೆತರೆ, ಕಡೆಗಾಣಿಸಿದರೆ ಅದನ್ನುಗೌರವಿಸುವವರು ಯಾರು?ಆದ್ದರಿಂದ ಕುಸಿಯುತ್ತಿರುವ ನಮ್ಮ ಭಾಷೆಯನ್ನು ನಾವಿಂದುಎತ್ತಿ ನಿಲ್ಲಿಸಬೇಕಾಗಿದೆ.ಆ ದಿಶೆಯಲ್ಲಿ ನಮ್ಮ ಪ್ರಯತ್ನಅಗತ್ಯ ಹಾಗೂ ಅನಿವಾರ್ಯ.ಕನ್ನಡ ಭಾಷೆಯ ಉಳಿವಿಗಾಗಿ, ಬೆಳವಣಿಗೆಗಾಗಿ ಮತ್ತು ವಿಸ್ತಾರಕ್ಕಾಗಿ ನಾವು ನಮ್ಮನ್ನುಹೇಗೆ ತೊಡಗಿಸಿಕೊಳ್ಳಬೇಕೆಂದು ಯೋಚಿಸಲೇ ಬೇಕು.ಆ ಕುರಿತಾಗಿ ನನ್ನ ಕೆಲವು ಅಭಿಪ್ರಾಯಗಳನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ.

kannada

• ಮನುಷ್ಯನಅವಶ್ಯಕತೆಎನ್ನುವುದು ನಿಂತ ನೀರಲ್ಲ. ಅದರಲ್ಲಿ ಸದಾ ಬದಲಾವಣೆ ಆಗುತ್ತಲೇ ಇರುತ್ತದೆ.ಆದರೆ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗುವಾಗ ಮೂಲತನವನ್ನು ಮರೆಯಬೇಕೆಂಬ ನಿಯಮವಿಲ್ಲ. ಆದ್ದರಿಂದಇವತ್ತು ನಾವು ಕನ್ನಡದಲ್ಲಿ ಮಾತನಾಡುವುದರಿಂದ ವಿಮುಖರಾಗುವ ಅವಶ್ಯಕತೆಯಿಲ್ಲ.ಉದ್ಯೋಗಕ್ಕಾಗಿ, ಅಂತರರಾಷ್ಟ್ರೀಯ ಸಂವಹನಕ್ಕಾಗಿ ನಮಗೆ ಉಳಿದ ಭಾಷೆಗಳು ಅಗತ್ಯವಾದರೂ ಅವುಗಳೇ ನಮ್ಮದೈನಂದಿನ ಭಾಷೆಗಳಾಗಬೇಕು ಅಂತಿಲ್ಲ. ಆ ಕಾರಣಕ್ಕಾಗಿ ನಾವು ನಮ್ಮ ಭಾಷೆಯನ್ನುತೊರೆಯಬೇಕಾದ ಅನಿವಾರ್ಯತೆಯೂ ಇಲ್ಲ. ಆದ್ದರಿಂದನಮ್ಮ ನಡುವಿನ ದೈನಂದಿನ ಮಾತು-ಕತೆಗಳಿಗೆ ಕನ್ನಡ ನಮ್ಮಆದ್ಯತೆಯಾಗಿರಬೇಕು.
• ಕನ್ನಡ ಭಾಷೆಯಲ್ಲಿ ಕಲಿಕೆ ಅಥವಾಕನ್ನಡ ಮಾಧ್ಯಮದಲ್ಲಿನಕಲಿಕೆಯಕುರಿತಾಗಿಇಂದು ಸಾಕಷ್ಟು ಗೊಂದಲಗಳು ಉಂಟಾಗಿವೆ. ಪ್ರಾಥಮಿಕ ಶಿಕ್ಷಣವು ಕನ್ನಡ ಮಾಧ್ಯಮದಲ್ಲಾದರೆಯಾವತೊಂದರೆಯುಇಲ್ಲಾ. ಜ್ಞಾನಎನ್ನುವುದುಅಥವಾ ಕಲಿಕೆ ಎನ್ನುವುದು ಭಾಷೆಯನ್ನು ಅವಲಂಬಿಸಿ ನಡೆಯುವಂತಹದ್ದಲ್ಲ.ಪ್ರಾಥಮಿಕ ಹಂತದಲ್ಲಿಕನ್ನಡ ಮಾಧ್ಯಮದಲ್ಲಿ ಶಿಕ್ಷಣ ದೊರಕುವಂತಾದರೆ, ನಮ್ಮ ಭಾಷೆ, ಸಾಹಿತ್ಯ ಇವುಗಳ ಪರಿಚಯವಾಗುತ್ತದೆ; ಆಸಕ್ತಿ, ಅಭಿಮಾನ ಬೆಳೆಯುವಂತಾಗುತ್ತದೆ.ಆದ್ದರಿಂದ ಪಾಲಕರುತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಹಿಂದೇಟು ಹಾಕಬಾರದು. ಸರಕಾರವು ಈ ಕುರಿತು ಹೆಚ್ಚಿನ ಆಸ್ಥೆ ತೋರಬೇಕು. ಪ್ರಾಥಮಿಕಶಿಕ್ಷಣದ ಹಂತವನ್ನು ರೂಪಾಂತರಗೊಳ್ಳುವ ಸಮಯಎಂದುಗುರುತಿಸಲಾಗಿದೆ. ಈ ಹಂತದಲ್ಲಿಒಂದು ಭಾಷೆಯನ್ನುಪರಿಪೂರ್ಣವಾಗಿಕಲಿಯುವ ಪ್ರಯತ್ನ ಮಾಡಿದರೆ, ಅದು ಉಳಿದ ಕಲಿಕೆಗೆ ಅನೂಕೂಲವಾಗುತ್ತದೆ. ಆ ಭಾಷೆ ನಮ್ಮ ಮಾತೃಭಾಷೆಯಾಗಿದ್ದರೆ ಕಲಿಕೆ ಸುಲಭ. ಆದ್ದರಿಂದ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ಆಗಲಿ.ಜ್ಞಾನ ಮತ್ತು ಭಾಷೆಒಟ್ಟೊಟ್ಟಿಗೆ ಬೆಳೆಯಲಿ.
• ಪ್ರಾಥಮಿಕ ಹಂತದಲ್ಲಿಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ನಂತರಕನ್ನಡದಕಡೆಗಣನೆಆಗಬಾರದು. ಮುಂದಿನ ಹಂತಗಳಲ್ಲಿಯೂ ಒಂದು ವಿಷಯವಾಗಿಕನ್ನಡಕಲಿಯಲೇಬೇಕು. ಆ ಹಂತಗಳಲ್ಲಿ ಕನ್ನಡ ಸಾಹಿತ್ಯದ ಪರಿಚಯಉಂಟಾಗಬೇಕು. ಹಾಗಾದಾಗಕನ್ನಡ ಸಾಹಿತ್ಯದಲ್ಲಿಆಸಕ್ತಿ ಹೆಚ್ಚುತ್ತದೆ. ಕನ್ನಡಓದುವ ಪ್ರವೃತ್ತಿ ಬೆಳೆಯುತ್ತದೆ.ಕನ್ನಡ ಭಾಷೆಗಳಲ್ಲಿನ ಪದಗಳ ಬಳಕೆ ಜೀವಂತವಾಗಿರುತ್ತದೆ. ಭಾಷೆಯ ಬೆಳವಣಿಗೆ ಉಂಟಾಗುತ್ತದೆ.
• ಮಕ್ಕಳಲ್ಲಿ ಓದುವಅಭಿರುಚಿ ಹೆಚ್ಚಾಗಬೇಕು ಅಂದರೆ ಮಕ್ಕಳ ಸಾಹಿತ್ಯ ಹೆಚ್ಚಾಗಬೇಕು. ಕಥಾ ಪುಸ್ತಕ, ಕವನ-ಚುಟುಕುಗಳೊಂದಿಗೆ, ತಂತ್ರಜ್ಞಾನ ಮತ್ತು ವೈಜ್ಞಾನಿಕ ಪುಸ್ತಕಗಳು ಕನ್ನಡದಲ್ಲಿದೊರೆಯುವಂತಾಗಬೇಕು.
• ಮಾಧ್ಯಮಕ್ಷೇತ್ರದಲ್ಲಿಕನ್ನಡ ಸಮರ್ಪಕವಾಗಿ ಬಳಕೆಯಾಗಬೇಕು. ಸಿನೇಮಾ, ಧಾರಾವಾಹಿ ಹಾಗೂ ಇನ್ನಿತರದೃಶ್ಯ ಮಾಧ್ಯಮಗಳಲ್ಲಿ ನಾವು ಯಾವ ರೀತಿಯ ಕನ್ನಡ ಬಳಕೆ ಮಾಡುತ್ತಿದ್ದೇವೆಎನ್ನುವಅರಿವು ನಮಗಾಗಬೇಕು. ಕನ್ನಡದಲ್ಲಿ ಮಾತನಾಡಿದ ಮಾತ್ರಕ್ಕೆಕನ್ನಡ ಜೀವಂತವಾಗಿದೆ ಅಂತಲ್ಲ. ಯಾವರೀತಿಯ ಮಾತುಗಳ ಬಳಕೆ ಆಗುತ್ತಿದೆಎನ್ನುವುದು ಮುಖ್ಯ. ಸಾಹಿತ್ಯಕ ಸಂಭಾಷಣೆಗಳು ಇಲ್ಲವೇ ಇಲ್ಲ ಅಂದರೂ ಅತಿಶಯೋಕ್ತಿಅಲ್ಲ. ಕೇವಲ ಕಥೆಯನ್ನು ಪೋಷಿಸುವ ಕೆಲವು ಶಬ್ದಗಳ ಜೋಡಣೆಯ ಮಾತುಗಳು ಅಲ್ಲಿ. ನಾಲ್ಕು ಶಬ್ದಗಳ ಒಂದು ವಾಕ್ಯದಲ್ಲಿ ಎರಡು ಇಂಗ್ಲಿಷ್‍ ಎರಡು ಕನ್ನಡ ಪದಗಳು! ಈ ಸಂಸ್ಕøತಿ ನಿಲ್ಲಬೇಕು. ನಿರ್ದೇಶಕರು ಕನ್ನಡ ಭಾಷೆಯನ್ನು ಹೆಚ್ಚಿನದಾಗಿ ಬಳಕೆ ಮಾಡಬೇಕು. ಸಾಹಿತ್ಯಿಕ, ಕಾವ್ಯಾತ್ಮಕ ಸಂಭಾಷಣೆಗಳಿಗೆ ಆದ್ಯತೆಕೊಡಬೇಕು.ಅರ್ಥಾತ್ ಭಾಷಾ ಪ್ರೌಢತೆ ಹೆಚ್ಚಾಗಬೇಕು.
• ಕನ್ನಡ ಪುಸ್ತಕಗಳನ್ನು ಪರಿಚಯ ಮಾಡಿಸುವ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಪತ್ರಿಕೆಗಳಲ್ಲಿ ಪುಸ್ತಕ ಪರಿಚಯ, ವಿಮರ್ಶೆಗಳ ಕುರಿತಾಗಿ ಅಂಕಣಗಳು ಇವೆ. ಅವುಗಳಲ್ಲಿ ಇತ್ತೀಚಿನ ಪುಸ್ತಕಗಳೊಂದಿಗೆ, ದಶಕಗಳ ಹಿಂದಿನ ಪುಸ್ತಕಗಳನ್ನು ಯುವಜನತೆಗೆ ಪರಿಚಯಿಸುವಕಾರ್ಯವಾಗಬೇಕು.ಇಂದುಗದ್ಯ ಪುಸ್ತಕಗಳನ್ನು ಓದುವ ಪ್ರವೃತ್ತಿಇದೆ. ಆದರೆಕಾವ್ಯ, ಗಮಕ ಇವುಗಳನ್ನು ಓದುವ ಪರಿಪಾಠಕಡಿಮೆಯಾಗುತ್ತಿದೆ. ಅವುಗಳ ಓದುವಿಕೆಯನ್ನು ಪರಿಚಯಿಸುವ ಕೆಲಸವಾಗಬೇಕು.ಜೊತೆಗೆ ಪುಸ್ತಕಗಳನ್ನು ಹೇಗೆ ಓದಬೇಕೆನ್ನುವಕುರಿತಾಗಿಯೂ ತಿಳುವಳಿಕೆ ಮೂಡಿಸಬೇಕು.
• ಆಧುನಿಕ ತಂತ್ರಜ್ಞಾನಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು. ಕನ್ನಡದ ಈ-ಪುಸ್ತಕಗಳು ಓದಲುದೊರೆಯಬೇಕು.ಅಂತರ್ಜಾಲ ಮಾಧ್ಯಮಗಳಲ್ಲಿ ಕನ್ನಡ ಭಾಷೆ ಬಳಕೆಯಾಗಬೇಕು. ಬ್ಲಾಗ್ ಬರಹಗಳಲ್ಲಿ, ಈ-ಪೇಪರ್‍ಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಗೆ ಆದ್ಯತೆ ನೀಡಬೇಕು.ಕನ್ನಡಭಾಷೆಯ ಬಳಕೆಗೆ ಯೋಗ್ಯವಾದ ಈ-ತಂತ್ರಜ್ಞಾನಗಳ ಆವಿಷ್ಕಾರವಾಗಬೇಕು.
• ಕನ್ನಡ ಭಾಷೆಯಲ್ಲಿಇಂದು ಅನೇಕ ಅಕ್ಷರಗಳನ್ನು ಕೈಬಿಡಲಾಗುತ್ತಿದೆ. ಇದು ನಿಲ್ಲಬೇಕು. ಭಾಷೆಯಲ್ಲಿನ ಶ್ರೇಷ್ಠ ಹಾಗೂ ವಿಶೇಷ ಅಂಶಗಳನ್ನು ತಿಳಿಸಬೇಕು. ಉದಾ: ಕನ್ನಡದಲ್ಲಿ ಬಳಸುವ ಅನೇಕ ಒತ್ತಕ್ಷರಗಳು ಕನ್ನಡದ ಅಂಕಿಗಳು. ಈ ರೀತಿಯಾಗಿ ನಾವು ಭಾಷೆಯ ವೈಶಿಷ್ಟ್ಯದ ಕುರಿತಾಗಿ ತಿಳಿಸಿದಾಗ ಜನರಿಗೆ ಭಾಷೆಯ ಬಳಸುವಿಕೆಯಲ್ಲಿ ಅಭಿಮಾನ ಹೆಚ್ಚುತ್ತದೆ.
• ನಮ್ಮ ನೆಲದಲ್ಲಿಕನ್ನಡ ನಾಡು-ನುಡಿಯರಕ್ಷಣೆಗಾಗಿನಾವು ಮುಷ್ಕರಗಳನ್ನು ಮಾಡುತ್ತೇವೆ. ಹೋರಾಟಗಳನ್ನು ಮಾಡುತ್ತೇವೆ. ಇದರಿಂದಕನ್ನಡ ಭಾಷೆಯ ಬೆಳವಣಿಗೆ ಆಗುತ್ತದೆಯೇ? ಒಂದು ಹಂತದಲ್ಲಿಅರ್ಥವಿಲ್ಲದಇಂತಹ ವಿಚಾರಗಳಿಂದ ನಾವು ಋಣಾತ್ಮಕ ಸಂದೇಶ ರವಾನಿಸಿದಂತಾಗುತ್ತದೆ. ಈ ರೀತಿಯಾದಅರ್ಥವಿಲ್ಲದ ಆಚರಣೆಗಳನ್ನು ಕೈಬಿಡಬೇಕು. ಭಾಷೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಹೋರಾಟದಎಲ್ಲ ಸಂದರ್ಭಗಳಲ್ಲಿಯೂ ನಾವು ನಮ್ಮ ಸಾಹಿತ್ಯದ ಮೌಲ್ಯದಕುರಿತು ತಿಳಿಸುವ ಪ್ರಯತ್ನ ಮಾಡಬೇಕು. ಸರಕಾರಕ್ಕೆ ಆ ಮೂಲಕ ಎಚ್ಚರಿಕೆ ನೀಡಬೇಕು.
• ಸಭೆ-ಸಮಾರಂಭಗಳಲ್ಲಿ ಕನ್ನಡ ಮಾತನಾಡುವ ಭಾಷಣಕಾರರನ್ನುಕರೆಯುವುದು ಎಷ್ಟು ಮುಖ್ಯವೋಅಂತೆಯೇಕನ್ನಡದಕುರಿತಾಗಿ ಮಾತನಾಡುವವರನ್ನುಕರೆಯುವುದುಕೂಡ ಇಂದಿನ ಅವಶ್ಯಕತೆ. ಆದ್ದರಿಂದಕನ್ನಡದ ಬಗ್ಗೆ ತಿಳಿದಿರುವವರಿಗೆ ವೇದಿಕೆ ಕಲ್ಪಿಸಿಕೊಡಬೇಕು.

ಕನ್ನಡದ ಉಳಿವಿಗಾಗಿ ಅನೇಕ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳೆಲ್ಲ ಈ ರೀತಿಯಾಗಿಕನ್ನಡಅಭಿಮಾನ ಹೆಚ್ಚಿಸುವ ಅಭಿಯಾನಗಳನ್ನು ಕೈಗೊಂಡಾಗ ಮಾತ್ರಕನ್ನಡ ಭಾಷೆಯರಕ್ಷಣೆ ಹಾಗೂ ವಿಸ್ತರಣೆ ಸಾಧ್ಯವಾಗುತ್ತದೆ.ಕನ್ನಡದರಕ್ಷಣೆಗಾಗಿ ನಾವು ಅನೇಕ ಯೋಜನಾ ವಿಧಾನಗಳನ್ನು ಹೇಳಬಹುದು.ಅವೆಲ್ಲವುಗಳನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಯಪ್ರವೃತ್ತಗೊಳಿಸಲು ಸಾಧ್ಯವಿಲ್ಲದಿರಬಹುದು.ಆದರೆ ಸಣ್ಣ ಪ್ರಮಾಣದಲ್ಲಿ, ಹಂತ-ಹಂತವಾಗಿ ನಾವು ಈ ವಿಧಾನಗಳನ್ನು ಜಾರಿಗೊಳಿಸಿದರೆ ಖಂಡಿತವಾಗಿಯೂಕನ್ನಡ ಉಳಿದು ಬೆಳೆಯುತ್ತದೆ.

-ಸಂಧ್ಯಾ ಶಾಸ್ತ್ರಿ

Categories: ಹರಿತ ಲೇಖನಿ

Tags:

Leave A Reply

Your email address will not be published.