ಸಂಸ್ಕೃತಿ ಉತ್ಸವಕ್ಕೆ ಸಜ್ಜಾಗುತ್ತಿದೆ ಮಂಚಿಕೇರಿ

ರಂಗಸಮೂಹ ಮಂಚಿಕೇರಿ ಇವರ ಆಶ್ರಯದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಸಂಸ್ಕೃತಿ ಉತ್ಸವವು ಮಂಚಿಕೇರಿಯ ಸಮಾಜ ಮಂದಿರದಲ್ಲಿ ನಡೆಯುತ್ತದೆ. ದಿನಾಂಕ ೧೭ ನವೆಂಬರ್ ಮಂಗಳವಾರ ಬೆಳಿಗ್ಗೆ ೧೦.೩೦ ಕ್ಕೆ ‘ಸಂಸ್ಕೃತಿ: ಸೃಜನಶೀಲ ಪ್ರತಿಕ್ರಿಯೆಗಳು’ ಈ ಕುರಿತಾಗಿ ಸಂವಾದ ಗೋಷ್ಠಿ ನಡೆಯಲಿದ್ದು ರಾಮಕೃಷ್ಣ ಭಟ್ ದುಂಡಿ, ಶ್ರೀಧರ್ ಬಳಗಾರ, ನರಹಳ್ಳಿ ಬಾಲಸುಬ್ರಮಣ್ಯ, ಕೆ.ವಿ ಅಕ್ಷರ, ಟಿ.ಪಿ. ಅಶೋಕ ಮುಂತಾದವರು ಪಾಲ್ಗೊಳ್ಳುವರು. ಅದೇ ದಿನ ಸಂಜೆ ೬ ರಿಂದ ಶ್ರೀಮತಿ ಅನಿತಾ ಹೆಗಡೆ ಹಾಗೂ ಶ್ರೀಮತಿ ಪೂರ್ಣಿಮಾ ಭಟ್ಟ ಬೆಂಗಳೂರು ಇವರಿಂದ ಹಿಂದೂಸ್ತಾನಿ ಗಾಯನ ನಡೆಯುತ್ತದೆ.

Manchikeri

ದಿನಾಂಕ 18 ಹಾಗೂ 19 ರಂದು ಸಂಜೆ ಏಳು ಘಂಟೆಗೆ ನೀನಾಸಂ ತಿರುಗಾಟ ತಂಡದವರಿಂದ ಕ್ರಮವಾಗಿ ಪಿ.ಲಂಕೇಶ ರಚಿತ ‘ಗುಣಮುಖ’ ಹಾಗು ಮೋಲಿಯೇರ್ ರಚಿತ ‘ತಾರ್ತೂಪ್’ ನಾಟಕಗಳ ಪ್ರದರ್ಶನವಿರುತ್ತದೆ. ಸಹೃದಯಿ ಕಲಾಭಿಮಾನಿಗಳು ಹಾಗೂ ಆಸಕ್ತರು ಸಮಯಕ್ಕೆ ಮುಂಚಿತವಾಗಿ ಹಾಜರಿದ್ದು ಈ ಸಂಸ್ಕೃತಿ ಉತ್ಸವದ ಯಶಸ್ಸಿಗೆ ಕಾರಣರಾಗಬೇಕೆಂದು ಸಂಘಟಕರು ತಿಳಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.