ಸಂಪಖಂಡದಲ್ಲಿ ಅಷ್ಟಾವಧಾನ ಕಾರ್ಯಕ್ರಮ

ಶ್ರೀ ಗಜಾನನ ಪ್ರೌಢಶಾಲೆಯ ಸುವರ್ಣ ಸಂಭ್ರಮ ವರ್ಷಾಚರಣೆಯ ಅಂಗವಾಗಿ ೨೨-೧೧-೨೦೧೫ ಭಾನುವಾರ ಅಷ್ಟಾವಧಾನ ಕಾರ್ಯಕ್ರಮ ನಡೆಯಲಿದೆ. ಶ್ರೀ ಗಜಾನನ ವಿಧ್ಯಾ ವರ್ಧಕ ಸಂಘ, ಸಂಪಖಂಡ ಇವರು ಸೇವಾ ಸಹಕಾರಿ ಸಂಘ ಸಂಪಖಂಡ, ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನ, ಕೆನರಾ ಬ್ಯಾಂಕ್ ಹಾಗೂ ಗಜಾನನ ಯುವಕ ಮಂಡಲ ಸಂಪಖಂಡ ಇವರ ಸಂಯುಕ್ತ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಶ್ರೀ ಗಣೇಶ ಭಟ್, ಕೊಪ್ಪಲತೋಟ ಸೇರಿದಂತೆ ಅನೇಕ ಸಾಹಿತಿಗಳು ಹಾಗೂ ಕಲಾವಿದರು ಪಾಲ್ಗೊಳ್ಳುವರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.